ಗೌರಿ ಲಂಕೇಶ್ ರನ್ನು ಸ್ಮರಿಸಲು 'ಗೌರಿ ಸ್ಮಾರಕ ಟ್ರಸ್ಟ್' ಸ್ಥಾಪನೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ನಂಬಿದ್ದ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ 'ಗೌರಿ ಸ್ಮಾರಕ ಟ್ರಸ್ಟ್' ರಚನೆ ಮಾಡಲಾಗಿದೆ. ಗೌರಿ ನಂಬಿದ್ದ ಮೌಲ್ಯಗಳನ್ನು ಎತ್ತಿಹಿಡಿಯುವ ಪತ್ರಿಕೆಯನ್ನು ಹೊರತರಲು ನೆರವಾಗುವುದು, ಸೇರಿ ಮುಖ್ಯ ಉದ್ದೇಶಗಳನ್ನು ಇಟ್ಟುಕೊಂಡು ಈ ಟ್ರಸ್ಟ್ ಆರಂಭಿಸಿದೆ.
ಗೌರಿ ಲಂಕೇಶ್ ಅವರ ಧ್ಯೇಯ ಸಾರಲು 'ಗೌರಿ ಮೆಮೊರಿಯಲ್ ಟ್ರಸ್ಟ್' ಪ್ರಾರಂಭಿಸಲಾಗಿದ್ದು ಉದ್ಘಾಟನೆ ಸಮಾರಂಭ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನಡೆಯಲಿದೆ. ಸತ್ಯ ನುಡಿಯುವ ಅನಿವಾರ್ಯತೆ ವಿಚಾರಗೋಷ್ಠಿಯನ್ನು ಕೂಡ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ತೀಸ್ತಾ ಸೆಟಲ್ ವಾಡ್, ದೇವನೂರು ಮಹಾದೇವ, ಡಾ. ವಿಜಯಮ್ಮ, ಗಣೇಶ್ ಎನ್. ದೇವಿ, ಕೆ. ನೀಲಾ, ಪ್ರಕಾಶ್ ರೈ, ಸಿದ್ಧಾರ್ಥ ವರದರಾಜನ್ ಭಾಗವಹಿಸಲಿದ್ದಾರೆ.
Comments