ಇಂಟರ್ನೆಟ್ ಸ್ಟಾರ್ ಆದ ಮಹಾರಾಷ್ಟ್ರದ ಪೊಲೀಸ್ ಪೇದೆ

ಜಲಗಾಂವ್ ನ ಕಾನ್ ಸ್ಟೇಬಲ್ ಸಂಘಪಾಲ್ ತಾಯ್ದೆ ಅವರ ಅದ್ಭುತ ಕಂಠಸಿರಿ ಇಂಟರ್ನೆಟ್ ನಲ್ಲಿ ಮೋಡಿ ಮಾಡಿದೆ. ಮೊದಲಿನಿಂದ್ಲೂ ಅವರಿಗೆ ಹಾಡುವ ಹವ್ಯಾಸವಿತ್ತು. ಆದ್ರೆ ಇತ್ತೀಚೆಗಷ್ಟೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದಾರೆ.
ಮೊದಲು ಫೇಸ್ಬುಕ್ ನಲ್ಲಿ ಇವರ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದ್ದು. ವೈರಲ್ ಆಗಿದ್ದ ಆ ವಿಡಿಯೋವನ್ನು 1.6 ಮಿಲಿಯನ್ ಜನರು ವೀಕ್ಷಿಸಿದ್ದರು. ಸಂಘಪಾಲ್ ಅವರ ಹಾಡುಗಾರಿಕೆ ಎಲ್ಲರಿಗೂ ಇಷ್ಟವಾಗಿದೆ. ಸಿನೆಮಾ ಹಾಡುಗಳಿಗೂ ಸೈ, ಜಾನಪದ ಗೀತೆಗೂ ಜೈ ಎಂದಿದ್ದಾರೆ ಈ ಪೇದೆ. ಯಾವುದೇ ತರಬೇತಿಯಿಲ್ಲದೆ ಇಷ್ಟು ಅದ್ಭುತವಾಗಿ ಹಾಡ್ತಿರೋ ಸಂಘಪಾಲ್, ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
Comments