ಸಂಸದ ಪ್ರತಾಪ್ ಸಿಂಹ ಟ್ವಿಟ್ ಗೆ ತಿರುಗೇಟು ನೀಡಿದ ಎಸ್ ಪಿ ರವಿ ಚನ್ನಣ್ಣನವರ್

ಹುಣಸೂರಿನಲ್ಲಿ ಭಾನುವಾರ ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನಿರಾಕರಿಸಿ, ಪ್ರತಾಪ್ ಸಿಂಹ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಸೋಮವಾರ ತಮ್ಮ ಟ್ವೀಟ್ ನಲ್ಲಿ ಎಸ್ಪಿ ರವಿ ಚನ್ನಣ್ಣನವರ್ ಬಗ್ಗೆ ಟೀಕಿಸಿದ್ದರು. ಈ ಬಗ್ಗೆ ಖಾಸಗಿ ಟಿವಿ ಚಾನಲ್ ಜತೆ ಮಾತನಾಡಿದ ಎಸ್ಪಿ ರವಿ ಚನ್ನಣ್ಣನವರ್, ಹೌದು ನಾನು ಅಣ್ಣಾಮಲೈ, ನಮ್ಮ ಸಹೋದ್ಯೋಗಿಗಳಿಂದ, ಪೊಲೀಸ್ ಪೇದೆಯಿಂದಲೂ ಕಲಿಯಬೇಕಾಗಿದೆ.
'ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ನಾವು ಸತ್ಯದ ಪರ, ಬಡವರ ಪರ, ಸರ್ವರ ಹಿತ ಮುಖ್ಯ. ಸಂವಿಧಾನದ ನಿರ್ದೇಶನದಂತೆ ಕ್ರಮ ತೆಗೆದುಕೊಂಡಿದ್ದೇವೆ' ಇದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್, ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಟ್ಟ ತಿರುಗೇಟು. ನಾವು ಎಂದೂ ಪರಿಪೂರ್ಣರಲ್ಲ, ಕಲಿಯೋದು ಇದ್ದೇ ಇರುತ್ತೆ, ಆದರೆ ನಾವು ಯಾರ ಆಣತಿಯಂತೆ ಕೆಲಸ ಮಾಡುವುದಿಲ್ಲ. ನಮಗೆ ಸಂಸದರ ಬಗ್ಗೆಯೂ ಗೌರವವಿದೆ. ಏನಾದರೂ ಆಕ್ಷೇಪ, ತೊಂದರೆಗಳಿದ್ದಲ್ಲಿ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಹೇಳಿದರು.
Comments