ಮೋಹಕ ತಾರೆ ರಮ್ಯಾ ಅವರ ಹೆಸರಲ್ಲಿ ಕ್ಯಾಂಟೀನ್ ಆರಂಭವಾಗಿದೆ
ರಾಜ್ಯಸರ್ಕಾರದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಮಂಡ್ಯದಲ್ಲಿ'ರಮ್ಯಾ ಕ್ಯಾಂಟೀನ್' ಆರಂಭವಾಗಿದ್ದು, ಈ ಕ್ಯಾಂಟೀನ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಮಂಡ್ಯದ ಅಶೋಕ ನಗರದಲ್ಲಿ 10 ರೂಪಾಯಿಗೆ ಊಟ ತಿಂಡಿ ಕೊಡುವ ಈ ಕ್ಯಾಂಟೀನ್ ಆರಂಭಗೊಂಡಿದೆ.
ರಮ್ಯಾ ಅಭಿಮಾನಿ ರಘು ಎಂಬಾತ ಅಶೋಕ ನಗರದ ಬಳಿ ಈ ಕ್ಯಾಂಟೀನ್ ಆರಂಭಿಸಿದ್ದು ಬಡ ಮತ್ತು ಮಧ್ಯಮ ವರ್ಗದ ಜನ್ರಿಗೆ ಕಡಿಮೆ ದರದಲ್ಲಿ ಅಂದರೆ, ಕೇವಲ 10 ರೂಪಾಯಿಗೆ ಬೆಳಿಗ್ಗೆ ದೋಸೆ, ಇಡ್ಲಿ, ಮಧ್ಯಾಹ್ನ ಮುದ್ದೆ-ಅನ್ನ-ಸಾಂಬಾರ್ ಊಟ ನೀಡಲು ಮುಂದಾಗಿದ್ದಾರೆ. ನೂತನವಾಗಿ ಆರಂಭಗೊಂಡ ರಮ್ಯಾ ಕ್ಯಾಂಟೀನ್ ನಲ್ಲಿ ಮೊದಲ ದಿನದಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಅವರೂ ಹೋಟೇಲ್ ಮಾಲೀಕರ ಜೊತೆ ಸೇರಿ, ಜನರಿಗೆ ಉಚಿತವಾಗಿ ಬೆಳಗಿನ ತಿಂಡಿ ಜೊತೆ ಸಿಹಿ ವಿತರಣೆ ಮಾಡಿದರು. ಮಂಡ್ಯದ ಮಿಮ್ಸ್ ಆಸ್ಪತ್ರೆ ಬಳಿಯೇ ಈ ರಮ್ಯಾ ಕ್ಯಾಂಟೀನ್ ಆರಂಭಿಸಲಾಗಿದ್ದು, ರೋಗಿಗಳ ಅನುಕೂಲಕ್ಕಾಗಿ ರವೆ-ಗಂಜಿ ಮತ್ತು ಬಿಸಿ ನೀರು ಕೂಡ ನೀಡಲು ಈ ಅಭಿಮಾನಿ ಮುಂದಾಗಿದ್ದಾರೆ. ಈ ಕ್ಯಾಂಟೀನ್ ಆರಂಭ ಕುರಿತಂತೆ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿರುವ ಈ ಅಭಿಮಾನಿ, ತಾನು ರಮ್ಯಾ ಅಭಿಮಾನಿ, ಹಾಗಾಗಿ ಈ ರೀತಿ ಜನ ಸೇವೆ ಮಾಡಲು ಮುಂದಾಗಿದ್ದೀನಿ ಎಂದು ಹೇಳಿದ್ದಾರೆ.
Comments