ದೇಶದಲ್ಲಿ 'ಬೈಸಿಕಲ್ ಶೇರಿಂಗ್' ಸೇವೆಯನ್ನು ನೀಡಲು ಮುಂದಾದ ಒಲಾ

ಒಲಾ ಇದೇ ಮೊದಲ ಬಾರಿಗೆ ದೇಶದಲ್ಲಿ 'ಬೈಸಿಕಲ್ ಶೇರಿಂಗ್' ಸೇವೆಯನ್ನು ನೀಡಲು ಮುಂದಾಗಿದೆ. ಅದುವೇ ನೀವು ಊಹಿಸಲು ಸಾಧ್ಯವಾದ ಬೆಲೆಯಲ್ಲಿ ಎಂದರೆ ನೀವು ನಂಬಲೇಬೇಕು. ಈಗಾಗಲೇ ಮಹಾ ನಗರಗಳಲ್ಲಿ ಸೈಕಲ್ ಸವಾರಿ ಕಡೆಗಡ ಹೆಚ್ಚಿನ ಜನರು ಆಕರ್ಷಿತರಾಗುತ್ತಿರುವ ಹಿನ್ನಲೆಯಲ್ಲಿ ಒಲಾ ಈ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ
ಬೆಲೆ ಮಾತ್ರ ತೀರಾ ಕಡಿಮೆ:ಒಲಾ ನೂತನವಾಗಿ ನೀಡುತ್ತಿರುವ ಪೇಡಲ್ ಸೇವೆಯೂ ಅತೀ ಕಡಿಮೆ ದರವನ್ನು ಹೊಂದಿದ ಎನ್ನಲಾಗಿದೆ. ಮೂಲಗಳ ಪ್ರಕಾರ ಪ್ರತಿ ಅರ್ಧ ಗಂಟೆಗೆ ರೂ.5 ದರವನ್ನು ವಿಧಿಸಿದೆ ಎನ್ನಲಾಗಿದೆ.
ಒಲಾ ಆಪ್ನಲ್ಲೇ ಪೇಡಲ್ ಸೇವೆ: ಒಲಾ ಆಪ್ನಲ್ಲಿಯೇ ಸೈಕಲ್ ಸೇವೆಯನ್ನು ನೀಡಲಿದೆ ಎನ್ನಲಾಗಿದ್ದು, ಒಲಾ ಬಳಕೆ ಮಾಡಿಕೊಳ್ಳುವ ಸೈಕಲ್ ಭಾರತದಲ್ಲೇ ನಿರ್ಮಾಣ ಮಾಡಿರುವುದಾಗಿರಲಿದೆ. ಅಲ್ಲದೇ ಈ ಸೈಕಲ್ಗಳು ಸ್ಮಾರ್ಟ್ ಲಾಕ್ ವ್ಯವಸ್ಥೆಯನ್ನು ಹೊಂದಿದ್ದು, ಬಳಕೆದಾರರಿಗೆ ಸಹಾಯವಾಗುವ ಎಲ್ಲಾ ಅಂಶಗಳನ್ನು ಮೈಗೂಡಿಸಿಕೊಂಡಿದೆ.
ಮೊದಲಿಗೆ ಕಾಲೇಜ್ ಕ್ಯಾಂಪಸ್ಗಳಲ್ಲಿ: ಒಲಾ ತನ್ನ ಪೇಡಲ್ ಸೇವೆಯನ್ನು ಮೊದಲಿಗೆ ಕಾಲೇಜ್ ಕ್ಯಾಂಪನ್ಗಳಲ್ಲಿ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಮೊದಲಿಗೆ ಐಐಟಿ ಕಾನ್ಪುರ್ ನಲ್ಲಿ ಸೇವೆಯನ್ನು ಆಂಭಿಸಿದೆ ನಂತರದಲ್ಲಿ ವಿವಿಧ ಕಡೆಗೆ ಸೇವೆಯನ್ನು ವಿಸ್ತರಿಸಲಿದೆ.
ಬೈಸಿಕಲ್ಗೂ GPS-QR ಕೋಡ್: ಒಲಾ ಬೈಸಿಕಲ್ ನಲ್ಲಿ GPS ಸೇವೆಯನ್ನು ನೀಡಲಿದ್ದು, ಜೊತೆಗೆ ಸ್ಮಾರ್ಟ್ಲಾಕ್ ಒಪನ್ ಮಾಡುವ ಸಲುವಾಗಿ QR ಕೋಡ್ಗಳನ್ನು ಸಹ ಅಳವಡಿಸಿದೆ ಎನ್ನಲಾಗಿದೆ. ಈಗಾಗಲೇ 600 ಸೈಕಲ್ ಗಳಿಗೂ ಇದನ್ನು ಇನಷ್ಟು ಹೆಚ್ಚಿಗೆ ಮಾಡುವ ಪ್ಲಾನ್ ಹೊಂದಿದೆ.
Comments