ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕಳ್ಳನ ಕೈಚಳಕ

ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯನಂತೆ ನಟಿಸಿ, ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗಿದ್ದ ನೆಲಮಂಗಲದ ಪದ್ಮಾವತಮ್ಮ ಎಂಬುವರ ಸರ ಎಗರಿಸಿ ಪರಾರಿಯಾಗಿದ್ದಾನೆ.
ಳ್ಳರು ಏನೆಲ್ಲಾ ಕೈಚಳಕ ಮೆರೆಯುತ್ತಾರೆ. ಯಾವೆಲ್ಲಾ ರೂಪದಲ್ಲಿ ಬರುತ್ತಾರೆ ಎನ್ನುವುದನ್ನು ಬಹುತೇಕ ಸಂದರ್ಭಗಳಲ್ಲಿ ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬ ಕಳ್ಳ ಕಳ್ಳತನಕ್ಕಾಗಿ ವೈದ್ಯನ ಗೆಟಪ್ನಲ್ಲಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ತನ್ನ ಗುರಿ ಸಾಧಿಸಿದ್ದಾನೆ. ಏಪ್ರಾನ್ ತೊಟ್ಟು, ಸ್ಟೆತಾಸ್ಕೋಪ್ ಹಿಡಿದು ಥೇಟ್ ವೈದ್ಯರಂತೆ ಬಂದಿದ್ದ ಖದೀಮ ಮಹಿಳೆಗೆ ಇಂಜೆಕ್ಷನ್ ನೀಡಿ ಮಹಿಳೆಯ ಕೊರಳಿನಲ್ಲಿದ್ದ 58 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ.
Comments