ಈದ್ ಮೀಲಾದ್-ಉನ್ ನಬಿಯವನ್ನು ಸಂಭ್ರಮದಿಂದ ಆಚರಿಸುತ್ತಿರುವ ಮುಸ್ಲಿಂ ಬಾಂಧವರು

ಮುಸ್ಲಿಂ ಬಾಂಧವರ ಪವಿತ್ರ ಸ್ಥಳ ಮೆಕ್ಕಾ, ಇಸ್ರೇಲ್‍ನ ಜರುಸಲೇಂ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳು, ಪಾಕಿಸ್ತಾನ ಹಾಗೂ ಏಷ್ಯಾ ಖಂಡದ ಮಹಮದೀಯರ ದೇಶಗಳೂ ಸೇರಿದಂತೆ ವಿಶ್ವದ ವಿವಿಧೆಡೆಗಳಲ್ಲಿ ಈದ್ ಮಿಲಾದ್‍ನ್ನು ಆಚರಿಸಲಾಯಿತು.
ಪ್ರವಾದಿ ಮಹಮದ್ ಅವರ ಜನ್ಮದಿನವಾದ ವಿಶ್ವದ ವಿವಿಧೆಡೆ ಮುಸ್ಲಿಂ ಬಾಂಧವರು ಇಂದು ಈದ್ ಮೀಲಾದ್-ಉನ್ ನಬಿಯನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಮಸೀದಿಗಳು, ಪ್ರಾರ್ಥನಾ ಮಂದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರೂ ಸೇರಿದಂತೆ ಕೆಲವು ಮುಸ್ಲಿಂ ಉಗ್ರಗಾಮಿ ಸಂಘಟನೆಗಳ ದಾಳಿ ಆತಂಕದ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.
Comments