ನಾಡಿನಾದ್ಯಂತ ಇಂದು ಹನುಮನ ಸ್ಮರಣೆ
ಬೆಂಗಳೂರಿನ ಗಾಳಿ ಆಂಜನೇಯ, ತುಮಕೂರಿನ ಕೋಟೆ ಆಂಜನೇಯ, ಮೈಸೂರು ರಸ್ತೆಯ ಕೋತಿ ಆಂಜನೇಯ, ಬಾಗೇಪಲ್ಲಿಯ ಬೈಲಾಂಜನೇಯ ಸೇರಿದಂತೆ ನಾಡಿನಾದ್ಯಂತ ಹನುಮ ದೇವಾಲಯಗಳಲ್ಲಿ ಇಂದು ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
ಜಿಟಿಜಿಟಿ ಮಳೆಯಲ್ಲೂ ಸಹ ಭಕ್ತರು ದೇವಸ್ಥಾನಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡುಬಂತು. ಹನುಮ ಜಯಂತಿ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಆಂಜನೇಯನಿಗೆ ಬೆಣ್ಣೆ ಅಲಂಕಾರ, ತರಕಾರಿ, ಹೂವು ಅಲಂಕಾರ ಸೇರಿದಂತೆ ಕಜ್ಜಾಯ, ಕೋಡಬಳೆ ಮತ್ತಿತರ ವಿವಿಧ ತಿನಿಸುಗಳಿಂದ ಹನುಮನಿಗೆ ಮಾಡಿದ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.
Comments