ಒಂದೇ ವೇದಿಕೆಯಲ್ಲಿ ಇಬ್ಬರು ಸಾಧಕರು
ಪ್ರಸಕ್ತ ಸನ್ನಿವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಜನಪ್ರಿಯತೆ ತಂದುಕೊಡ್ತಿರುವವರಲ್ಲಿ ಪ್ರಮುಖರೆಂದ್ರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ಸುಂದರಿ ಮಾನುಷಿ ಚಿಲ್ಲರ್. ವಿಶೇಷ ಅಂದ್ರೆ ಈ ಇಬ್ಬರು ಸಾಧಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ, ಮಾನುಷಿಯನ್ನು ಗೌರವಿಸಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಇಂಡಿಯನ್ ಕ್ರಿಕೆಟ್ ಮತ್ತಷ್ಟು ಹೆಸರು ಮಾಡಿದೆ. ಬ್ಯಾಟಿಂಗ್ ಜೊತೆಜೊತೆಗೆ ನಾಯಕತ್ವವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಕೊಹ್ಲಿ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಕೊಹ್ಲಿ, ಸಚಿನ್ ದಾಖಲೆಯನ್ನು ಮುರಿಯಬಹುದು ಅನ್ನೋದು ಎಲ್ಲರ ನಿರೀಕ್ಷೆ. ಇನ್ನೊಂದ್ಕಡೆ 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಸುಂದರಿ ಕಿರೀಟ ತಂದುಕೊಟ್ಟವರು ಚಂಡೀಗಢದ ಚೆಲುವೆ ಮಾನುಷಿ ಚಿಲ್ಲರ್. 2000ನೇ ಇಸ್ವಿಯಲ್ಲಿ ಪ್ರಿಯಾಂಕಾ ಚೋಪ್ರಾ ಮಿಸ್ ಇಂಡಿಯಾ ಕಿರೀಟ ತೊಟ್ಟಿದ್ದರು. ಅದಾದ್ಮೇಲೆ ಭಾರತೀಯರಿಗೆ ಈ ಪ್ರಶಸ್ತಿ ಒಲಿದಿರಲಿಲ್ಲ.ಈ ಬಾರಿ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.
Comments