ಪ್ರಧಾನಿ ಮೋದಿಯ ರಾಜಕೀಯದ ತಂತ್ರಗಳನ್ನು ಬಿಚ್ಚಿಟ್ಟ ದೇವೇಗೌಡ್ರು

30 Nov 2017 3:45 PM | General
399 Report

ಪ್ರಧಾನಿಯವರ ಈವರೆಗಿನ ಎಲ್ಲಾ ತಂತ್ರಗಳೂ ಸವಕಲು ನಾಣ್ಯದಂತಾಗಿವೆ, ಇದು ಮನವರಿಕೆ ಆದ ಮೇಲೆ ಗೋಹತ್ಯೆ ನಿಷೇಧ ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿರಬಹುದು ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಹೇಳಿದ್ದಾರೆ.

ದೇಶದಲ್ಲಿ ವಿವಾದಿತ ಗೋಹತ್ಯೆ ನಿಷೇಧ ವಾಪಸ್ ನಿರ್ಧಾರದ ಹಿನ್ನೆಲೆಯಲ್ಲಿ ದೇವೇಗೌಡರು ಈ ಪ್ರತಿಕ್ರಿಯೆ ನೀಡಿದರು. ಕಳೆದ ಮೂರೂವರೆ ವರ್ಷದಿಂದ ಪ್ರಧಾನಿ ಅವರ ಬಾಯಲ್ಲಿ ಬರೀ ಅಭಿವೃದ್ಧಿಯ ಘೋಷಣೆ ಮೊಳಗುತ್ತಿತ್ತು. ಈ ಗನ್‌ಗಳಿಂದಲೇ ಗುಜರಾತ್ ಚುನಾವಣೆಯಲ್ಲಿ ಲಾಭವಾಗದು ಎಂದು ಮೋದಿಗೆ ಮನವರಿಕೆಯಾಗಿದೆ. ಇದು ಅವರ ಕೊನೆಯ ಅಸ್ತ್ರ ಮತ್ತು ತಂತ್ರಗಾರಿಕೆಯ ಪ್ರಯೋಗ ಎಂದರು.ಈ ನಡೆ ಗುಜರಾತ್‌ನಲ್ಲಿ ಚುನಾವಣೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಗಿಂತ ಹಿಂದುತ್ವದ ಮೊರೆ ಹೋಗಿವೆ, ರಾಹುಲ್ ಗಾಂಧಿ ಸಹ ದೇವಾಲಯಗಳಿಗೆ ಎಡತಾಕುತ್ತಿದ್ದಾರೆ.

Edited By

Shruthi G

Reported By

Shruthi G

Comments