‘ನಮ್ಮ ಟೈಗರ್'ನಲ್ಲಿ 2 ಬಗೆಯ ದರದ ಕ್ಯಾಬ್ ಗಳನನ್ನು ಪರಿಚಯಿಸಲಾಗಿದೆ

‘ನಮ್ಮ ಟೈಗರ್'ನಲ್ಲಿ ಸದ್ಯಕ್ಕೆ 2 ಬಗೆಯ ದರದ ಕ್ಯಾಬ್ ಗಳನನ್ನು ಪರಿಚಯಿಸಲಾಗಿದೆ. ಮಿನಿ ಕ್ಯಾಬ್'ಗೆ ಪ್ರತಿ ಕಿ.ಮೀಗೆ ರೂ.12.50 ಸೆಡಾನ್ ನಲ್ಲಿ ಪ್ರತಿ ಕಿ.ಮೀ. ರೂ. 14.50 ಇದೆ. ಮೊದಲ 4 ಕಿ.ಮೀಗೆ ಕ್ರಮವಾಗಿ 69.79 , ಮುಂದೆ ಎಸ್'ಯುವಿ ಪರಿಚಯಿಸಲಾಗುತ್ತಿದ್ದು, ರೂ.18.50 ಮತ್ತು 4 ಕಿಮೀಗೆ ರೂ.9 ದರ ನಿಗದಿ ಮಾಡಲು ಉದ್ದೇಶಿಸಲಾಗಿದೆ ಎಂದು ಚಾಲಕರ ಸಂಘ ಅಧ್ಯಕ್ಷ ತನ್ವೀರ್ ಪಾಷಾ ಅವರು ಹೇಳಿದ್ದಾರೆ.
ಓಲಾ ಹಾಗೂ ಉಬರ್ ಕಂಪನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ನೂತನ ಆಯಪ್ 'ನಮ್ಮ ಟೈಗರ್' ಬುಧವಾರ ಲೋಕಾರ್ಪಣೆಗೊಂಡಿದೆ.ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು 'ನಮ್ಮ ಟೈಗರ್'ಗೆ ಹಸಿರು ನಿಶಾನೆ ತೋರಿದರು. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನೂತನ ಸಂಸ್ಥೆಯನ್ನು ಆರಂಭಿಸಲಾಗಿದೆ.
ಕ್ಯಾಬ್ ಚಾಲಕ ರಾಜು ಎಸ್. ಮಾತನಾಡಿ, ಹಲವು ತಿಂಗಳಿಂದಲೂ ನಮ್ಮ ಟೈಗರ್ ಆರಂಭಗೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಈ ಸೇವೆ ಆರಂಭವಾಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳಿತ್ತು. ಕೊನೆಗೂ ನಮ್ಮ ಟೈಗರ್ ಆರಂಭಗೊಂಡಿದೆ. ಪ್ರಸ್ತುತ ನಮಗೆ ದೊರೆಯುತ್ತಿರುವ ಅನುಕೂಲಕ್ಕಿಂತಲೂ ನಮ್ಮ ಟೈಗರ್ ನಲ್ಲು ಉತ್ತಮ ಲಾಭವಿದೆ. ಶುಲ್ಕವನ್ನು ನಿಗದಿ ಮಾಡಿರುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ.
Comments