ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಾಲಿವುಡ್ ಖ್ಯಾತ ನಟಿ

30 Nov 2017 1:03 PM | General
251 Report

ಕಾಜೋಲ್​ ತಮ್ಮ ತಾಯಿ ತನುಜಾ ಹಾಗೂ ಪುತ್ರ ಯುಗ್​ ಜತೆಗೆ ಮಠಕ್ಕೆ ಭೇಟಿ ನೀಡಿದ್ದರು. ಕಾಜೊಲ್​ ಶ್ರೀ ಸಿದ್ಧಾರೂಢರ ಮತ್ತು ಗುರುನಾಥಾರೂಢರ ಮೂಲ ಗದ್ದುಗೆಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ಮಠದ ಟ್ರಸ್ಟ್ ಕಮಿಟಿ ವತಿಯಿಂದ ಕಾಜೊಲ್ ಮತ್ತು ಅವರ ತಾಯಿಯನ್ನು ಸನ್ಮಾನಿಸಿ ರಕ್ಷೆ ತೊಡಿಸಲಾಯಿತು.

ಇದೇ ವೇಳೆ ಮಾತನಾಡಿದ ಕುಟುಂಬವರ್ಗದವರು, ಮೊದಲಿಂದಲೂ ನಾವು ಸಿದ್ಧಾರೂಢ ಮಠಕ್ಕೆ ಬರುತ್ತಿದ್ದೆವು. ನಾವು ಸಿದ್ಧಾರೂಢ ಸ್ವಾಮಿಯ ಪರಮ ಭಕ್ತರು. ಈ ಬಾರಿ ಕಾಜೊಲ್ ಅವರನ್ನು ಕರೆದುಕೊಂಡು ಬಂದಿರುವುದಾಗಿ ತಿಳಿಸಿದರು.

 

Edited By

Shruthi G

Reported By

Madhu shree

Comments