ವಿಪಕ್ಷಗಳ ಜೊತೆಗಿನ ಮೈತ್ರಿ ಬಗ್ಗೆ ಸ್ಪಷ್ಟ ಪಡಿಸಿದ ದೇವೇಗೌಡ್ರು

ಕಾಂಗ್ರೆಸ್ ಜತೆ ಹೋಗಿ ಏನಾಯ್ತು, ಬಿಜೆಪಿ ಜತೆ ಹೋದಾಗ ಏನೆಲ್ಲಾ ಆಯ್ತು ಎಂಬ ಕಹಿ ಅನುಭವ ನಮಗಿದೆ. ಮುಂದಿನ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.
ತಾಲೂಕಿನ ಹುಲುವಾಡಿ ಯಲ್ಲಿ ಮಾತನಾಡಿದ ಅವರು, ಹಿಂದಿನ ಕಟು ಅನುಭವಗಳನ್ನು ಆಧರಿಸಿ ನಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ ಎಂದರು.ರಾಜ್ಯದ ಜನ ಮತ್ತು ರೈತರ ಹಿತ ಕಾಯುವ ಉದ್ದೇಶದಿಂದ ನಮ್ಮ ಪಕ್ಷ ಮತದಾರರ ಮುಂದೆ ಹೋಗಲಿದೆ. ನಮ್ಮ ಜನಪರ ಕಾಳಜಿಯನ್ನು ಒಪ್ಪಿಜನತೆ ನಮಗೆ ಅಧಿಕಾರ ನೀಡಿದ್ದೇ ಆದಲ್ಲಿ, ನಾವು ಉತ್ತಮ ಆಡಳಿತ ನೀಡಲು ಸಿದ್ಧರಿದ್ದೇವೆ ಎಂದರು.
Comments