ಪೊಲೀಸ್ ಕಾನ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಅರ್ಜಿಗೆ ಅಹ್ವಾನ

29 Nov 2017 2:25 PM | General
229 Report

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ / 10ನೇ ತರಗತಿ / ಇದಕ್ಕೆ ಸಮನಾದ ಶಿಕ್ಷಣವನ್ನು ಪಡೆದಿರಬೇಕು, ಇಲಾಖೆ ನಿಗದಿ ಪಡಿಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆಯ್ಕೆ ವಿಧಾನ : ಸಹಿಷ್ಣುತೆ ಪರೀಕ್ಷೆ, ದೇಹದಾರ್ಢತೆ ಪರೀಕ್ಷೆ ಮತ್ತು ದೈಹಿಕಾ ಸಾಮರ್ಥ್ಯ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರೀಯೆ ನಡೆಯಲಿದೆ.

ಹುದ್ದೆಗಳ ವಿವರ :   ಹುದ್ದೆಗಳ ಸಂಖ್ಯೆ : 395
ಪುರುಷ - 356
ಮಹಿಳಾ - 39

ಅರ್ಹತೆ : ಒಂದಕ್ಕಿಂತ ಹೆಚ್ಚು ಜೀವಂತ ಪತ್ನಿ ಹೊಂದಿರುವ ಪುರುಷ, ಈಗಾಗಲೇ ಮತ್ತೊಬ್ಬ ಹೆಂಡತಿ ಇರುವ ಪುರುಷನನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿ ಇಲ್ಲದೇ ನೇಮಕಾತಿಗೆ ಅರ್ಹರಾಗಿರುವುದಿಲ್ಲ.

ವಯೋಮಿತಿ : ಕನಿಷ್ಠ 18 ವರ್ಷ ಹಾಗೂ ಪ.ಜಾ, ಪಪಂ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 27 ವರ್ಷ, ಇತರೆ ಅಭ್ಯರ್ಥಿಗಳಿಗೆ 25 ವರ್ಷ ಹಾಗೂ ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ವಯಸ್ಸನ್ನು ನಿಗದಿಗೊಳಿಸಲಾಗಿದೆ. ಸೈನಿಕರಿಗೂ ವಿಶೇಷ ವಿನಾಯಿತಿ ಇದ್ದು ಇಲಾಖೆಯ ನಿಭಂದನೆಗಳಿಗೆ ಒಳಪಟ್ಟಿರುತ್ತದೆ 

ಶುಲ್ಕ : ಸಾಮಾನ್ಯ, ಪ್ರವರ್ಗ 2(ಎ), 2(ಬಿ), 3(ಎ) ವರ್ಗದವರಿಗೆ 250 ರೂ.ಗಳು. ಹಾಗೂ ಪ.ಜಾ, ಪಪ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ ನಿಗದಿ ಪಡಿಸಲಾಗಿದೆ. ಶುಲ್ಕವನ್ನು ಎಸ್ ಬಿ ಐ ಬ್ಯಾಂಕ್ ಅಥವಾ ಸ್ಥಲೀಯ ಅಂಚೆ ಕಚೇರಿಯಲ್ಲಿ ಚಲನ್ ಪಡೆದು ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-12-2017
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 20-12-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.ksp.gov.in ಗೆ ಭೇಟಿ ನೀಡಿ.

Edited By

Shruthi G

Reported By

Madhu shree

Comments