ಪಾಲಿಕೆಯ ಜೆಡಿಎಸ್ ನಾಯಕಿಯಾಗಿ ನೇತ್ರಾ ನಾರಾಯಣ್ ಆಯ್ಕೆ
ಜೆಡಿಎಸ್ ನಾಯಕಿಯಾಗಿ ನೇತ್ರಾ ನಾರಾಯಣ್ ನೇಮಕಗೊಂಡಿದ್ದಾರೆ ಎಂದು ಮೇಯರ್ ಸಂಪತ್‌ರಾಜ್ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇಂದು ಪ್ರಕಟಿಸಿದರು.
ಕಾವಲ್ ಬೈರಸಂದ್ರ ವಾರ್ಡ್‌ನ ಜೆಡಿಎಸ್ ಸದಸ್ಯೆ ನೇತ್ರಾನಾರಾಯಣ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಪಾಲಿಕೆಯ ಜೆಡಿಎಸ್ ನಾಯಕಿಯಾಗಿ ನೇಮಕ ಮಾಡಿದ್ದಾರೆ ಎಂದು ಮೇಯರ್ ಸಭೆಯ ಗಮನಕ್ಕೆ ತಂದರು.ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಈ ವೇಳೆ ಮೇಜು ಕುಟ್ಟಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೇತ್ರಾ ನಾರಾಯಣ್, ಪಾಲಿಕೆಯಲ್ಲಿ ಜೆಡಿಎಸ್ ನಾಯಕಿಯಾಗಿ ತಮ್ಮನ್ನು ಆಯ್ಕೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಗೋಪಾಲಯ್ಯ ಹಾಗೂ ಎಲ್ಲ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು.
Comments