ವಿಶ್ವಸುಂದರಿ ಮಾನುಷಿಗೆ ಸಣ್ಣದೊಂದು ಆಸೆ ಇದ್ಯಂತೆ ..!!

ಇತ್ತೀಚೆಗೆ ವಿಶ್ವಸುಂದರಿ ಪಟ್ಟ ಧರಿಸಿರುವ ಮಾನುಷಿ ಚಿಲ್ಲರ್ ಅವರಿಗೆ ಸಣ್ಣದೊಂದು ಆಸೆ ಈಡೇರಿಸಿಕೊಳ್ಳಬೇಕು ಎಂಬ ಆಶಯ. ನಾನು ಏನಾದರೂ ಸಿನಿಮಾರಂಗಕ್ಕೆ ಪ್ರವೇಶಿಸಿದರೆ ಬಾಲಿವುಡ್ ನಟ ಅಮೀರ್ ಖಾನ್ ಜೊತೆ ನಟಿಸಬೇಕು ಎಂಬ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಹೌದು, ವಿಶ್ವಸುಂದರಿ ಮಾನುಷಿ ಚಿಲ್ಲರ್ ಅವರು ಅಮೀರ್ ಖಾನ್ ಚಿತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅವರ ಜೊತೆ ನಟಿಸುವ ಆಫರ್ ಬಂದರೆ ಖಂಡಿತವಾಗಿ ನಟಿಸುತ್ತೇನೆ ಎಂದಿದ್ದಾರೆ. ಅಮೀರ್ ಖಾನ್ ಅವರ ಸಾಕಷ್ಟು ಸಿನಿಮಾಗಳು ವಿಭಿನ್ನವಾಗಿ ಮೂಡಿ ಬಂದಿವೆ. ಅವರು ಕಥೆಗೆ ಬಹಳ ಮಹತ್ವ ಕೊಡುತ್ತಾರೆ. ಹೀಗಾಗಿ ಅವರ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಜಾಸ್ತಿ. ಹಾಗಾಗಿ ಅವರ ಜೊತೆ ನಟಿಸಲು ಹೆಚ್ಚು ಇಷ್ಟಪಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಅವರ ಆಸೆ ಆದಷ್ಟು ಬೇಗ ಈಡೇರಲಿ.
Comments