ಗಗನಕ್ಕೇರಿದ ಈರುಳ್ಳಿ ಬೆಲೆ ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಬೆಲೆಯು ಒಂದು ಕಿ.ಲೋ.ಗೆ 80 ರೂ. ಆಗಿದೆ. ಬೇರೆ ನಗರಗಳಲ್ಲೂ ಈರುಳ್ಳಿ ಬೆಲೆಯು ಗಗನಕ್ಕೇರಿದೆ ಎಂದು ವ್ಯಾಪಾರಿಗಳಿಂದ ತಿಳಿದುಬಂದಿದೆ. ಇತರ ಕೆಲವೊಂದು ಮೆಟ್ರೋ ನಗರಗಳಲ್ಲಿ ಈರುಳ್ಳಿ ಗುಣಮಟ್ಟ ಮತ್ತು ನಗರವನ್ನು ಆಧರಿಸಿ ಈರುಳ್ಳಿಯನ್ನು 50-60 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ
ಏಷ್ಯಾದ ಅತೀ ದೊಡ್ಡ ತರಕಾರಿ ಮಾರುಕಟ್ಟೆ ದೆಹಲಿಯ ಅಜಾದ್ ಪುರ ಮಂಡಿಯಲ್ಲಿ ಈರುಳ್ಳಿ ಬೆಲೆಯು 50-60 ರೂ ಆಗಿದೆ. ಅದು ಚಿಲ್ಲರೆ ಮಾರುಕಟ್ಟೆಯಲ್ಲಿ ಸುಮಾರು 80 ರೂ.ಗೆ ಮಾರಲಾಗುತ್ತಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಿಂದ ಈರುಳ್ಳಿ ಮಾರುಕಟ್ಟೆಗೆ ಬರದೇ ಇರುವ ಕಾರಣ ಬೆಲೆ ಏರಿಕೆಯಾಗಿದೆ ಎಂದು ಇಲ್ಲಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
Comments