ಹೈದರಾಬಾದ್ ಮೆಟ್ರೋಗೆ ಚಾಲನೆ ನೀಡಿದ ಮೋದಿ

ಹೈದರಾಬಾದ್ ನಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.ಮೆಟ್ರೋ ರೈಲು ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ರೈಲಿನಲ್ಲಿ ಸಂಚರಿಸಿದರು. ತೆಲಂಗಾಣದ ಮುಖ್ಯ ಮಂತ್ರಿ ಕೆ.ಚಂದ್ರಶೇಖರ ರಾವ್ ಉಪಸ್ಥಿತರಿದ್ದರು.
ನಂತರ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್, ರಾಜ್ಯಪಾಲ ಇಎಸ್ಎನ್ ನರಸಿಂಹನ್ ಜತೆ ಹೊಸದಾಗಿ ಉದ್ಘಾಟನೆಯಾದ ಮೆಟ್ರೋ ರೈಲಿನಲ್ಲಿ ಕುಕುಟ್ಪಲ್ಲಿವರೆಗೆ ಪ್ರಯಾಣಿಸಿದರು. ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ಸೇವೆಗೆ ಮೆಟ್ರೋ ರೈಲು ಮುಕ್ತವಾಗಲಿದೆ. 2012ರಲ್ಲಿ ಮೆಟ್ರೋ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಮೊದಲ ಹಂತದಲ್ಲಿ 30 ಕಿ.ಮೀ ದೂರದ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ತಂತ್ರಜ್ಞಾನ ಸಚಿವ ಕೆ.ಟಿ ರಾಮರಾವ್ ಹೇಳಿದರು.
Comments