ICSE, ISC ವಿದ್ಯಾರ್ಥಿಗಳಿಗೆ ಗುಡ್‌‌ನ್ಯೂಸ್‌‌

28 Nov 2017 3:40 PM | General
502 Report

ಐಸಿಎಸ್‌ಇ ಹಾಗೂ ಐಎಸ್‌ಸಿ ವಿದ್ಯಾರ್ಥಿಗಳಿಗೆ ಗುಡ್‌‌ನ್ಯೂಸ್‌‌ವೊಂದು ದೊರೆತಿದೆ. ಐಸಿಎಸ್‌ಇ ಮತ್ತು ಐಎಸ್‌ಸಿಯ 10 ಹಾಗೂ 12ನೇ ತರಗತಿಗಳ ಕನಿಷ್ಠ ಉತ್ತೀರ್ಣ ಅಂಕಗಳನ್ನು ಕಡಿತಗೊಳಿಸಲಾಗಿದೆ.

ಐಸಿಎಸ್‌ಇ 10 ನೇ ತರಗತಿಯ ಉತ್ತೀರ್ಣ ಅಂಕ 35ರಿಂದ 33ಕ್ಕೆ ಹಾಗೂ ಐಎಸ್‌ಸಿ 12ನೇ ತರಗತಿಯ ಉತ್ತೀರ್ಣ ಅಂಕ 40ರಿಂದ 35ಕ್ಕೆ ಇಳಿಸಲಾಗಿದೆ. ಈ ಬಗ್ಗೆ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಪರಿಷತ್ತು ಸುತ್ತೋಲೆ ಹೊರಡಿಸಿದೆ. 2018-19ನೇ ಶೈಕ್ಷಣಿಕ ಸಾಲಿನಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.  

Edited By

Shruthi G

Reported By

Shruthi G

Comments