ಬಿಬಿಎಂಪಿ ಕರ್ಮಕಾಂಡಗಳಿಗೆ ಕೊನೆಯೇ ಇಲ್ಲವೇ?
ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪಾಲಿಕೆಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು, ಆದರೆ ಅದರಲ್ಲಿ ಕೋಟ್ಯಾಂತರ ರೂಪಾಯಿಯನ್ನು ಬಿಬಿಎಂಪಿ ಅಧಿಕಾರಿಗಳು ತಮ್ಮ ಜೇಬಿಗೆ ಇಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಮಳೆ ಪರಿಹಾರ ವಿತರಣೆಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಸುದ್ದಿ ಕೇಳಿ ಬಂದಿದ್ದು, ಬಿಬಿಎಂಪಿ ಕರ್ಮಕಾಂಡಗಳಿಗೆ ಕೊನೆಯೇ ಇಲ್ಲವೇ ಅನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೋಲ್ಮಾಲ್ ನಡೆದಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಪರಿಹಾರದ ರೂಪದಲ್ಲಿ 6,440 ಫಲಾನುಭವಿಗಳಿಗೆ 5200 ರೂಪಾಯಿ ರೂಪದಲ್ಲಿ ಒಟ್ಟು 3 ಕೋಟಿ 34 ಲಕ್ಷದ 88 ಸಾವಿರ ಹಣ ವಿತರಣೆ ಮಾಡಿರುವುದಾಗಿ ಪಾಲಿಕೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ಇದರ ಅರ್ಧದಷ್ಟೂ ಮನೆಗಳಿಗೆ ಹಾನಿಯೇ ಆಗಿಲ್ಲ ಎನ್ನುವುದು ವಾಸ್ತವ.
Comments