ಪ್ರಧಾನಿ ಹುದ್ದೆ ಬಿಟ್ರೂ, ತಿರುಪತಿಗೆ ಹೋಗೋದು ಬಿಡೋಲ್ಲ : ದೇವೇಗೌಡ್ರು

ನಾನು ಪ್ರಧಾನಿ ಆದಾಗ ಹಲವರು ತಿರುಪತಿಗೆ ಹೋಗಬೇಡ ಅಂದ್ರು.ಜ್ಯೋತಿ ಬಸು, ಸುರ್ಜಿತ್ ಸೇನ್ ಕೂಡ ಹೋಗಬೇಡಿ ಅಂದ್ರು.ಆದ್ರೆ ಪ್ರಧಾನಿ ಹುದ್ದೆ ಬೇಕಿದ್ರೂ ಬಿಟ್ಟು ಬಿಡ್ತೀನಿ, ತಿರುಪತಿಗೆ ಹೋಗೋದು ಬಿಡೋಲ್ಲ ಅಂದೆ,ಅಷ್ಟರ ಮಟ್ಟಿಗೆ ನಮ್ಮಲ್ಲಿ ನಂಬಿಕೆಗಳು ಬೇರೂರಿವೆ ಎಂದು ದೇವೇಗೌಡ ಹೇಳಿದರು.
ರಾಜಕಾರಣ ಬಿಟ್ಟು ಸಾಹಿತ್ಯ ಪರಿಷತ್ ನಡೆಸುವುದು ತುಂಬಾ ಕಷ್ಟ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಂಯುಕ್ತ ಸರ್ಕಾರ ಇದ್ದಾಗ ಸುವರ್ಣ ಸೌಧ ಕಟ್ಟಿದ್ರು.
ಕುಮಾರಸ್ವಾಮಿಗೆ ಆಗ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಅಧಿಕಾರಿಗಳನ್ನು ಕರೆಸಿ ಅಧಿವೇಶನಕ್ಕೆ ಸುವರ್ಣ ಸೌಧ ಕಟ್ಟಲು ಸೂಚನೆ ನೀಡಿದ್ದರು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸುವರ್ಣ ಸೌಧ ಕಟ್ಟಲಾಯ್ತು ಎಂದರು.ಹೋರಾಟ ಹಿಂಸಾತ್ಮಕ ಹೋರಾಟ ಆಗಬಾರದು, ಅಹಿಂಸಾತ್ಮಕವಾಗಿ ಆಗಬೇಕು. ಅಣ್ಣಾದೊರೈ ಡಿಎಂಕೆ ಪಕ್ಷ ಕಟ್ಟಿದ್ರು. ರಾಮನ ಫೋಟೋವನ್ನ ಬೀದಿಯಲ್ಲಿ ತುಳಿದರು. ಮೇಲ್ಜಾತಿಯವರು ಶೋಷಣೆ ಮಾಡ್ತಾರೆ ಎಂದು ತೋರಿಸಲು ಹಾಗೆ ಮಾಡಿದ್ರು. ಆದರೆ ಅದರಲ್ಲಿ ಅವರು ಯಶಸ್ವಿಯಾಗಿ ಆಗಲಿಲ್ಲ. ನಂಬಿಕೆ ವಿಷಯದಲ್ಲಿ ಕಾನೂನು ಚೌಕಟ್ಟನ್ನು ಬಿಟ್ಟು ಆಚೆ ಬರಲು ಆಗಲೇ ಇಲ್ಲ ಎಂದರು.
Comments