ಅನಿತಾ-ಡಿಕೆಶಿ ಮಾತುಕತೆಯ ಬಗ್ಗೆ ಎಚ್ ಡಿಕೆ ಪ್ರತಿಕ್ರಿಯೆ



ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಮಾಡಬೇಕೆಂಬ ನಿಲುವು ನಮ್ಮದು. ಆ ಕ್ಷೇತ್ರದಲ್ಲೇ ಯಾರನ್ನಾದರೂ ಒಬ್ಬರನ್ನ ಅಭ್ಯರ್ಥಿ ಮಾಡಿ ಎಂದು ಸೂಚಿಸಿದ್ದೆ. ಆದರೆ, ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು ಮುಖಂಡರು ಅನಿತಾರನ್ನೇ ಅಭ್ಯರ್ಥಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಾರ್ಯಕರ್ತರ ಒತ್ತಾಯದಿಂದ ಒಂದು ರೀತಿಯ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ದೇವೇಗೌಡರ ಜೊತೆ ಚರ್ಚಿಸಿ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುತ್ತೆವೆ ಎಂದು ಎಚ್.ಡಿ.ಕುಮಾರಸ್ವಾಮಿಯವರು ರಾಮನಗರದ ಮರಳವಾಡಿಯಲ್ಲಿ ಹೇಳಿಕೆ ನೀಡಿದರು.
ಇತ್ತೀಚೆಗೆ ಕನಕ ಉತ್ಸವ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದರ ಬಗ್ಗೆ ಕೂಡಾ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದರು.ರಾಜಕಾರಣದ ವಿಚಾರದಲ್ಲಿ ನನ್ನದೇ ಬೇರೆ ಅವರದ್ದೇ ಬೇರೆ ದಾರಿ. ಇನ್ನೂ ಕಾರ್ಯಕ್ರಮವೊಂದರಲ್ಲಿ ಅನಿತಾ ಕುಮಾರಸ್ವಾಮಿಯವರೊಂದಿಗೆ ಡಿಕೆ ಶಿವಕುಮಾರ್ ಜೊತೆ ಸಹಜವಾಗಿ ಮಾತನಾಡಿದ್ದಾರೆ. ಅದಕ್ಕೆ ಬೇರೆ ರಾಜಕೀಯದ ಅರ್ಥ ಕೊಡೋದು ಬೇಡ ಎಂದು ಇದೇ ಸಮಯದಲ್ಲಿ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.
ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ಒಪ್ಪಂದವಿಲ್ಲ. ನನಗೆ ಕಾರ್ಯಕರ್ತರು ಮುಖ್ಯವೇ ಹೊರತು, ನನಗೆ ಬೇರೆ ಪಕ್ಷದ ಮುಖಂಡರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ. ನಮ್ಮ ಒಕ್ಕಲಿಗ ಸಮಾಜದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗುವಂತೆ ಸಮುದಾಯದ ಸ್ವಾಮೀಜಿಗಳು ಹಾಗೂ ಹಿರಿಯರು ಹೇಳಿರುವ ಪ್ರಕಾರದ ಸಮಾಜದ ವಿಚಾರದಲ್ಲಿ ಮಾತ್ರ ನಾವು ಒಂದಾಗಿರ್ತೇವೆ.
ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಳವಾಡಿ ಹೋಬಳಿಯ ಗೆಂಡೇಗೌಡನದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಖಾಸಗಿ ಶಾಲಾ ವಾಹನಗಳ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕೆಂದು ಮನವಿ ಮಾಡ್ತೇನೆ. ಮಕ್ಕಳ ಜೀವದ ಜೊತೆ ಯಾರೊಬ್ಬರೂ ಚೆಲ್ಲಾಟವಾಡಬೇಡಿ. ಮಕ್ಕಳ ಸಾವು ಹೃದಯವನ್ನೇ ಚೂರು ಮಾಡುತ್ತೆ ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಡಿ ಬಿಡುಗಡೆ ಮಾಡಲಾಗುವುದು. ನಾವು 224 ಕ್ಷೇತ್ರಗಳಲ್ಲಿ ಏಕಾಂಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಅನಿವಾರ್ಯವೆಂದು ಅವರಿಗೆ ಗೊತ್ತಿದೆ. ಆದರೆ, ರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆಯಿದ್ದು, 113 ಕ್ಷೇತ್ರಗಳಲ್ಲಿ ಗೆದ್ದು ಏಕಾಂಗಿ ಅಧಿಕಾರಕ್ಕೆ ತರಲು ರಾಜ್ಯದ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Comments