ವಿಶ್ವದ ಅತಿದೊಡ್ಡ ಡೈನಿಂಗ್ ಹಾಲ್ ಮೇಲೆ ಟ್ರಂಪ್, ಮೋದಿ ಭೋಜನಕೂಟ

ಹೈದ್ರಾಬಾದ್: ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಟ್ರಂಪ್, ಪುತ್ರಿ ಇವಾಂಕಾ ಸೇರಿದಂತೆ ಹಲವಾರು ಗಣ್ಯರು ಹೈದ್ರಾಬಾದ್ ನ ಫಾಲಕ್ನುಮ್ ಪ್ಯಾಲೇಸ್ ನಲ್ಲಿ ವಿಶ್ವದ ಅತಿ ದೊಡ್ಡ ಡೈನಿಂಗ್ ಹಾಲ್ ಮೇಲೆ ಭೋಜನ ಸವಿಯಲಿದ್ದಾರೆ.
ಹೈದ್ರಾಬಾದ್: ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಟ್ರಂಪ್, ಪುತ್ರಿ ಇವಾಂಕಾ ಸೇರಿದಂತೆ ಹಲವಾರು ಗಣ್ಯರು ಹೈದ್ರಾಬಾದ್ ನ ಫಾಲಕ್ನುಮ್ ಪ್ಯಾಲೇಸ್ ನಲ್ಲಿ ವಿಶ್ವದ ಅತಿ ದೊಡ್ಡ ಡೈನಿಂಗ್ ಹಾಲ್ ಮೇಲೆ ಭೋಜನ ಸವಿಯಲಿದ್ದಾರೆ. ವಿಶ್ವದ ಅತಿ ತೊಡ್ಡ ಡೈನಿಂಗ್ ಹಾಲ್ ಇದಾಗಿದ್ದು, ಇಲ್ಲಿ ಅಮೆರಿಕಾ ಅಧ್ಯಕ್ಷರೊಬ್ಬರು ಭೋಜನಕೂಟದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂಬತಾಗಿದೆ.
ಅಂದಹಾಗೆ, ಹೈದ್ರಾಬಾದ್ ನಲ್ಲಿರುವ ತಾಜ್ ಫಾಲಕ್ನುಮ್ ಪ್ಯಾಲೇಸ್ ಹೊಟೇಲ್ ಹೈದ್ರಾಬಾದ್ ನಿಜಾಮ್ಸ್ ಅಂತಲೇ ಫೇಮಸ್ ಆಗಿದೆ. ಸುಮಾರು 101 ಡೈನಿಂಗ್ ಹಾಲ್ ಗಳನ್ನು ಒಳಗೊಂಡಿರುವ ಈ ಹೊಟೇಲ್ ನಲ್ಲಿ ಜಗತ್ತಿನ ಎಲ್ಲಾ ತರಹದ ಭಕ್ಷ್ಯಗಳ ಮೆನುಗಳನ್ನು ಸಿದ್ಧಪಡಿಸಲಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 28ರಂದು ಮಂಗಳವಾರ ಹೈದ್ರಾಬಾದ್ ಗೆ ಆಗಮಿಸಲಿದ್ದು, ಅಮೆರಿಕಾದ ಅಧ್ಯಕ್ಷರ ಜತೆಗೆ ಪ್ರಧಾನಿ ಮೋದಿ ಸೇರಿದಂತೆ 100 ಜನ ಅತಿಥಿಗಳು ಭಾಗಿಯಾಗಲಿದ್ದಾರೆ ಎಂದು ಹೈದ್ರಾಬಾದ್ ಪೊಲೀಸ್ ಕಮಿಷನರ್ ವಿವಿ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ.
Comments