ನ. 27 ರಂದು ದಲಿತಪರ ಸಂಘಟನೆಗಳೊಂದಿಗೆ ಕುಮಾರಣ್ಣನ ನೇರ ಸಂವಾದ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಬಿ.ಬಿ.ಲಿಂಗಯ್ಯ ಅವರು, ನವೆಂಬರ್ 27 ರ ಸೋಮವಾರ ಬೆಳಗ್ಗೆ 11 ಕ್ಕೆ ನಗರದ ಪುರಭವನದಲ್ಲಿ ದಲಿತಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳ ನೇರ ಸಂವಾದ ಆಯೋಜಿಸಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇರ ಸಂವಾದದಲ್ಲಿ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆ ವಿಚಾರ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ, ದಲಿತ ರೈತರ ಸಮಸ್ಯೆ, ನೋವು ಕುರಿತು ಚರ್ಚೆ ನಡೆಸಲಾಗುತ್ತದೆ. ಜನತಾದಳ ಸರ್ಕಾರದ ಅವಧಿಯ ಕಾರ್ಯಕ್ರಮ ಮತ್ತು ಮುಂದಿನ ಸರ್ಕಾರದ ಅವಧಿಯಲ್ಲಿ ಹೇಗೆ ಕೆಲಸ ಮಾಡಬೇಕು ಎನ್ನುವ ಕುರಿತು ದಲಿತಪರ ಸಂಘಟನೆಗಳ ಮುಖಂಡರ ಸಲಹೆ ಪಡೆಯಲಾಗುತ್ತದೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ದಲಿತಪರ ಯಾವ ರೀತಿ ಕೆಲಸ ಮಾಡಬೇಕು, ದಲಿತರ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎನ್ನುವ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದಲಿತಪರ ಸಂಘಟನೆಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಬಿ.ಬಿ.ಲಿಂಗಯ್ಯ ತಿಳಿಸಿದ್ದಾರೆ.ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದಲಿತರ ಮೂಲಭೂತ ಸಮಸ್ಯೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ದಲಿತರ ಸಮಸ್ಯೆ ತಪ್ಪಿಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಈ ಚರ್ಚೆ ನಡೆಸಲಾಗುತ್ತದೆ. ಕೃಷಿ, ವಿದ್ಯಾರ್ಥಿ ಸಮುದಾಯಕ್ಕೆ ಉದ್ಯೋಗ ತೊಂದರೆ, ಸರ್ಕಾರೇತರ ಸಂಸ್ಥೆ ಮೂಲಕ ಉದ್ಯೋಗ ಸೃಷ್ಠಿ ಕುರಿತು ಸಂವಾದ ನಡೆಸಲಾಗುತ್ತದೆ ಎಂದರು.
ನಮ್ಮ ಹಳ್ಳಿಗಳ ದಲಿತರ ಪರಿಸ್ಥಿತಿ ಬದಲಾಗಿಲ್ಲ. ಹಾಗಾಗಿ ನಮ್ಮ ಪ್ರಣಾಳಿಕೆ ಹೇಗಿರಬೇಕು, ದಲಿತರ ಸಮಸ್ಯೆಗಳೇನು, ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚೆ ನಡೆಯಲಿದೆ. ಗ್ರಾಮ ವಾಸ್ತವ್ಯದ ಮೂಲಕ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಗಮನ ಸೆಳೆದಿದ್ದರು. ಆದರೆ ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಈಗ ಮತ್ತೆ ರಾಜ್ಯ ಪ್ರವಾಸ ಮಾಡಿ ಗ್ರಾಮ ವಾಸ್ತವ್ಯದ ಮೂಲಕ ಜನರ ಕಷ್ಟಕ್ಕೆ ಸ್ಪಂದನೆ ಮಾಡುತ್ತಿದ್ದಾರೆ. ನಮಗೆ ಮುಂದೆ ಅವಕಾಶ ಸಿಕ್ಕರೆ ಏನು ಮಾಡಬೇಕು ಎಂದು ಆಲಿಸಲು ಈ ಸಂವಾದ ಕರೆದಿದ್ದಾರೆ. ಇದು ಪಕ್ಷದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಅಲ್ಲ. ಮಾಜಿ ಸಿಎಂ ಆಗಿ ಸಂವಾದ ನಡೆಸಲಿದ್ದು, ಡಿಸೆಂಬರ್‌ನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಪೂರ್ವ ತಯಾರಿಯಾಗಿ ಈ ಸಂವಾದ ನಡೆಯಲಿದೆ ಎಂದರು.
Comments