ಇಂದಿರಾ ಕ್ಯಾಂಟೀನ್ ನ ಆಹಾರ ಸಿಬ್ಬಂದಿಯ ಕೈ ಚಳಕ ಬಯಲು

ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡಲು ರಾಜ್ಯ ಸರ್ಕಾರ ಪ್ರಾರಂಭಿಸಿದ ಮಹಾತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್. ಮಹಾನಗರದ, ಸಿಲಿಕಾನ್ ಸಿಟಿಯ ಹಸಿದವರ ಹೊಟ್ಟೆ ತುಂಬಿಸಿ, ಇಂದು ಪ್ರಸಿದ್ದಿಯಾಗಿದೆ. ಇದೇ ಕ್ಯಾಂಟೀನ್ ರಾಜ್ಯದೆಲ್ಲೆಡೆ ವಿಸ್ತರಿಸಬೇಕು ಎಂಬ ಕೂಗಿಗೂ ಒಪ್ಪಿರುವ ಕಾಂಗ್ರೆಸ್ ಆಡಳಿತದ ಸರ್ಕಾರ, ರಾಜ್ಯದ ಜಿಲ್ಲಾವಾರು, ತಾಲ್ಲೂಕುವಾರು ಕೇಂದ್ರಗಳಲ್ಲೂ ಸ್ಥಾಪಿಸಲು ಹೆಜ್ಜೆ ಇಟ್ಟಿದೆ. ಆದರೇ ಈ ಅನ್ನ ಕ್ಯಾಂಟೀನ್ ಸಿಬ್ಬಂದಿಯ ಪಾಲಾಗುತ್ತಿದೆ.
ಹೌದು, ಇದು ನಿಜಾ ಎಂಬ ಮಾಹಿತಿಯನ್ನು ಅನೇಕ ಮಾಧ್ಯಗಳ ಮೂಲಕ ಹೊರಬಿದ್ದಿದೆ. ಇಂದಿರಾ ಕ್ಯಾಂಟೀನ್ ಊಟವನ್ನು, ಕ್ಯಾಂಟೀನ್ ಸಿಬ್ಬಂದಿ ಗ್ರಾಹಕರಿಗೆ ವಿತರಿಸದೇ, ಈ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗುವುದು ತಿಳಿದು ಬಂದಿದೆ. ಈ ಬಗ್ಗೆ ಕ್ಯಾಂಟೀನ್ನ ಬಳಿಯ ಸೆಕ್ಯೂರಿಟಿ ಗಾರ್ಡ್ ಒಬ್ಬರು ಮಾಹಿತಿ ಬಿಚ್ಚಿಟ್ಟಿದ್ದು, ಇದು ಸತ್ಯವೆನ್ನುವುದನ್ನು ಎತ್ತಿ ತೋರಿಸಿದೆ. ಅಂದಹಾಗೇ ಮಹಾನಗರ ಪಾಲಿಕೆಯ 198 ವಾರ್ಡ್ಗಳ ಪೈಕಿ 151 ಕಡೆಗಳಲ್ಲಿ ಸದ್ಯ ಕಾರ್ಯನಿರ್ವಹಸುತ್ತಿರುವ ಕ್ಯಾಂಟೀನ್ಗಳಲ್ಲಿ ಪ್ರತಿ ದಿನ ಒಂದೂವರೆ ಸಾವಿರ ಜನರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಅನ್ನುವ ಮಾತು ಪಾಲಿಕೆಯದ್ದು. ಆದರೆ, ವಾಸ್ತವಾನೇ ಬೇರೆ. ಪ್ರತಿ ತಿಂಡಿ,ಊಟದ ಸಮಯದಲ್ಲೂ ಕನಿಷ್ಠ 10 ರಿಂದ 20 ಮಂದಿ ಅಡುಗೆ ಮನೆಗೆ ಬಂದು ಕ್ಯಾನ್ಗಳಲ್ಲಿ ಊಟಗಳನ್ನ ತುಂಬಿಸಿಕೊಂಡು ಹೋಗುತ್ತಾರಂತೆ. ಪ್ರತಿ ಕ್ಯಾಂಟೀನ್ನಲ್ಲಿ ಉಸ್ತುವಾರಿಗೆ ಎಂದು ಮ್ಯಾನೇಜರ್ ಇದ್ದೂ, ಅವರ ಕುಮ್ಮಕ್ಕಿನಿಂದಲೇ ಈ ರೀತಿ ಆಹಾರದ ಪಾರ್ಸಲ್ ಅನ್ಯರ ಪಾಲಾಗುತ್ತಿದೆಯಂತೆ.ಇದನ್ನ ಯಾರಾದರೂ ಪ್ರಶ್ನೆ ಮಾಡಿದರೆ ಸ್ಥಳೀಯ ಕಾರ್ಪೋರೇಟರ್ಗಳ ಹೆಸರು ಹೇಳುತ್ತಾರೆ ಅನ್ನುವ ಮಾತುಗಳೂ ಕೇಳಿ ಬರುತ್ತಿವೆ.
Comments