ಕೋಲ್ಡ್​ ಡ್ರಿಂಕ್ಸ್​​ ಕುಡಿಯುವ ಮುನ್ನ ಒಮ್ಮೆ ಯೋಚಿಸಿ ...!!

25 Nov 2017 10:44 AM | General
325 Report

ಹುಬ್ಬಳ್ಳಿಯ ಗಾಮನಗಟ್ಟಿ ನಿವಾಸಿ ಸುಭಾಸ್​ ಗೌಡರ್​ ಎಂಬುವರು ಮದುವೆಯ ಸಮಾರಂಭವೊಂದರಲ್ಲಿ ಮದು ಮಕ್ಕಳಿಗೆ ನೀಡಲು ಕೋಲ್ಡ್​ ಡ್ರಿಂಕ್ಸ್​ ತಿರಿಸಿದ್ದರು. ತರಿಸಿದ ಎರಡು ಬಾಟಲಿಗಳಲ್ಲಿಯೂ ಕಸ ಇರುವುದನ್ನು ಗಮನಿಸಿದ ಅವರು ಮರಳಿ ಅಂಗಡಿಗೆ ತೆರಳಿ ಮಾಲೀಕನ ಗಮನಕ್ಕೆ ವಿಷಯವನ್ನ ತರಲು ಮುಂದಾಗಿದ್ದಾರೆ.

ಪ್ರಯಾಣ ಸಂದರ್ಭದಲ್ಲಿ ಅಥವಾ ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಬಹುತೇಕರು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಇದರ ಸೇವನೆ ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ ನೈಸರ್ಗಿಕ ಪಾನೀಯ ಎಳನೀರಿನ ಬದಲಾಗಿ ಅದನ್ನೇ ಬಯಸುತ್ತಾರೆ. ಅಂತವರಿಗೊಂದು ಮಾಹಿತಿ ಇಲ್ಲಿದೆ. ಹುಬ್ಬಳ್ಳಿಯ ನವನಗರದಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕರೊಬ್ಬರು ತಂಪು ಪಾನೀಯವೊಂದನ್ನು ತೆಗೆದುಕೊಂಡಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲಿ ಅವರ ಗಮನ ಬಾಟಲಿಯೆಡೆಗೆ ಹೋಗಿದ್ದು, ಬೆಚ್ಚಿ ಬಿದ್ದಿದ್ದಾರೆ. ಅದರಲ್ಲಿ ಹುಳು ಹಾಗೂ ಕಸ, ಕಡ್ಡಿ ತೇಲಾಡುತ್ತಿರುವುದು ಕಂಡು ಬಂದಿದೆ. ಮೊದಲಿಗೆ ನೀವೆ ಬಾಟಲಿ ಮುಚ್ಚಳ ತೆರೆದು ಕಸ ಹಾಕಿರಬಹುದು ಎಂದ ಮಾಲೀಕ ನಂತರ ಸುಭಾಸ್​ ಅವರ ಒತ್ತಡಕ್ಕೆ ಮಣಿದು ತಮ್ಮ ಅಂಗಡಿಯಲ್ಲಿರುವ ಉಳಿದ ಸ್ಲೈಸ್​ ಬಾಟಲಿಯನ್ನು ಪರೀಕ್ಷಿಸಿದ್ದಾರೆ, ಆಗ ಅವುಗಳಲ್ಲಿಯೂ ಕಸ ಇರುವುದು ಪತ್ತೆಯಾಗಿದೆ. ಬಾಟಲಿಯ ಮೇಲೆ ಉತ್ಪನ್ನ ತಯಾರದ ದಿನಾಂಕ, ಅದರ ಅವಧಿ ಮುಗಿಯುವ ದಿನಾಂಕ, ಐಎಸ್​ಐ ಮಾರ್ಕ್​ ಇಲ್ಲ ಎಂದು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಸುಭಾಸ್​ ಗೌಡರ ಹೇಳಿದ್ದಾರೆ. ಈ ರೀತಿ ಯಾವುದೇ ಮಾಹಿತಿ ಬಾಟಲಿಯ ಮೇಲೆ ಇರದಿರುವುದನ್ನ ನೋಡಿದರೆ ಇದು ನಿಜವಾಗಿಯೂ ಸ್ಲೈಸ್​ ಕಂಪನಿಯ ತಂಪು ಪಾನಿಯವಾ ಅಥವಾ ಅಕ್ರಮವಾಗಿ ತಯಾರಿಸಿದ ನಕಲಿ ಕೋಲ್ಡ್​ ಡ್ರಿಂಕ್ಸ್​ ಇರಬಹುದಾ ಎಂಬ ಅನುಮಾನ ಮೂಡಿದೆ.

Edited By

Shruthi G

Reported By

Madhu shree

Comments