ಅಂಬೇಡ್ಕರ್ ಮೊಮ್ಮೊಗ ದೇವೇಗೌಡರನ್ನು ಭೇಟಿ ಮಾಡಿದ ಹಿಂದಿನ ರಹಸ್ಯವೇನು

ಡಾ. ಬಿ ಆರ್ ಅಂಬೇಡ್ಕರ್ ಅವರ ಮೊಮ್ಮೊಗ, ಮಾಜಿ ಸಂಸದ ಹಾಗೂ ಭಾರತೀಯ ರಿಪಬ್ಲಿಕ್ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ತ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರನ್ನು ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು. ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಇದ್ದರು.
ಭಾರತ ಜಾತ್ಯತೀತ ರಾಷ್ಟ್ರ,ಇಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಧರ್ಮ ರಾಜಕಾರಣವನ್ನು ಭಾರತೀಯ ಜನತಾ ಪಕ್ಷ ಮಾಡುತ್ತಿದೆ. ದೇಶವು ಈಗ ಅಪಾಯದ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಂಸದ ಹಾಗೂ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಯಶ್ವಂತ್ ಶುಕ್ರವಾರ ಅಭಿಪ್ರಾಯ ಪಟ್ಟರು.ದೇವೇಗೌಡರು ಮಾತನಾಡಿ, ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಜನ್ಮದಿನದ ಕಾರ್ಯಕ್ರಮಕ್ಕಾಗಿ ಪ್ರಕಾಶ್ ಯಶ್ವಂತ್ ಅವರು ಬಂದಿದ್ದರು. ಇದೇ ವೇಳೆ ಕುಮಾರಸ್ವಾಮಿ ಅವರ ಆರೋಗ್ಯ ಕೂಡ ವಿಚಾರಿಸಿದರು. ನಮ್ಮ ಭೇಟಿಗೆ ರಾಜಕೀಯ ಉದ್ದೇಶಗಳಿರಲಿಲ್ಲ ಎಂದು ಅವರು ಹೇಳಿದರು.
ಪ್ರಕಾಶ್ ಯಶ್ವಂತ್ ಅಂಬೇಡ್ಕರ್ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕಿಂತ ಕೆಟ್ಟ ಆಡಳಿತ ನೀಡುತ್ತಿದೆ ಎನ್ ಡಿಎ. ಮೂರು ವರ್ಷದ ಹಿಂದೆ ಆರ್ಥಿಕ ಸ್ಥಿತಿಗಿಂತ ಈಗಿನ ಪರಿಸ್ಥಿತಿ ಕೆಟ್ಟದಾಗಿದೆ. ಈಗ ಪ್ರಾದೇಶಿಕ ಪಕ್ಷಗಳಿಗಿಂತ ಕೆಟ್ಟ ಕೆಳ ಮಟ್ಟದಲ್ಲಿದೆ ಕಾಂಗ್ರೆಸ್ ನ ಸ್ಥಿತಿ. ರಾಷ್ಟ್ರೀಯ ಪಕ್ಷ ಅಂತ ಇರುವುದು ಬಿಜೆಪಿ ಮಾತ್ರ ಎಂದರು. ಈ ಸಲ ಗುಜರಾತ್ ನ ವಿಧಾನಸಭಾ ಚುನಾವಣೆ ಬಿಜೆಪಿಗೆ ಸಲೀಸಲ್ಲ.
Comments