ಮಹದಾಯಿ, ಕಾವೇರಿ ಪ್ರಕರಣಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ

ಮಹದಾಯಿ, ಕಾವೇರಿ ನೀರಿನ ವಿಚಾರಗಳು ಸೇರಿದಂತೆ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ, ಸಂಸದರು ದನಿ ಎತ್ತುತ್ತಿಲ್ಲ. ಈ ಅಸ್ತ್ರವನ್ನು ಕನ್ನಡಿಗರು ಬಳಸಿಕೊಂಡು ನಾಡಿನ ಹಿತ ಕಾಯುವವರನ್ನು ಸಂಸತ್‌ಗೆ ಆರಿಸಿ ಕಳುಹಿಸಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್. ಶಿವರಾಮೇಗೌಡ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪ್ರಮುಖವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್. ಶಿವರಾಮೇಗೌಡ ಹೇಳಿದ್ದಾರೆ. ನಗರದ ಮಾರುತಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ಅನ್ಯ ರಾಜ್ಯದವರು ಇಲ್ಲಿನ ಜಮೀನುಗಳನ್ನು ಖರೀದಿಸಿ, ರೈತರನ್ನು ಕೂಲಿ ಕಾರ್ಮಿಕರನ್ನಾಗಿಸುತ್ತಿದ್ದಾರೆ. ಕನ್ನಡದ ಕೆಲಸ ಎಂದರೆ ಬರೀ ಭಾಷೆಯ ಕೆಲಸವಲ್ಲ. ಇಲ್ಲಿನ ಜನರ ಜೀವನ ಹಸನಾಗಬೇಕು. ಬಹು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಬಳಸುವ ಬದಲು ಇಲ್ಲಿನ ರೈತರ ಉತ್ಪನ್ನಗಳನ್ನು ಬಳಸಿ ಅವರಿಗೆ ನೆರವಾಗಬೇಕು ಎಂದು ಹೇಳಿದರು.
Comments