ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ವಾಸ್ಕೊ- ಪಾಟ್ನಾ ರೈಲು

24 Nov 2017 10:43 AM | General
376 Report

ಬಿಹಾರದ ಪಾಟ್ನಾಗೆ ತೆರಳುತ್ತಿದ್ದ ರೈಲು ಇಂದು ನಸುಕಿನ ಜಾವ 4.18ರ ಸುಮಾರಿಗೆ ಮಾಣಿಕ್ ಪುರ ರೈಲು ನಿಲ್ದಾಣದ ಹತ್ತಿರ ಹಳಿ ತಪ್ಪಿತು. ಇದಕ್ಕೂ ಮುನ್ನ ನಿನ್ನೆ ಲಕ್ನೋದ ಹತ್ತಿರ ಪ್ರಯಾಣಿಕರ ರೈಲೊಂದು ಬೊಲೆರೊಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು.

ರೈಲಿನ 13 ಬೋಗಿಗಳು ನಸುಕಿನ ಜಾವ 4.18ರ ಹೊತ್ತಿಗೆ ಹಳಿಯಿಂದ ಜಾರಿ ಅಪಘಾತ ಸಂಭವಿಸಿದೆ. ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನಲ್ಲಿಯೇ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರ ಮಧ್ಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿತ್ ಮಾಳ್ವೀಯಾ ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯವಾದವರ ಕುಟುಂಬಕ್ಕೆ ತಲಾ 50,000 ರೂಪಾಯಿಗಳ ಪರಿಹಾರವನ್ನು ರೈಲ್ವೆ ಸಚಿವಾಲಯ ಘೋಷಿಸಿದೆ.

Edited By

Hema Latha

Reported By

Madhu shree

Comments