ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನ ನಷ್ಟ ಮೊಕದ್ದಮೆ ದೂರು

ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಫೇಸ್ಬುಕ್, ಟ್ವಿಟರ್ ಅಕೌಂಟ್ ನಲ್ಲಿ ಹಾಕಿರುವ ಪೋಸ್ಟ್ ಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದೇನೆ. ನನ್ನ ವೈಯಕ್ತಿಕ ಹಾಗೂ ಸಾಂಸಾರಿಕ ವಿಚಾರಗಳ ಬಗ್ಗೆ ಟ್ವೀಟ್ ಮಾಡಿ ಅವಹೇಳನ ಮಾಡಿದ್ದಾರೆ. ಹಾಗಾಗಿ ನಾನು ಕಾನೂನು ಸಮರ ಆರಂಭಿಸಿದ್ದೇನೆ ಎಂದರು.
ಇದೇ ವೇಳೆ ಅವರು ಮಗ ಸತ್ತಾಗ ಡ್ಯಾನ್ಯರ್ ಹಿಂದೆ ಓಡಿ ಹೋದೆ ಎಂದು ಹಾಕ್ತೀರಾ, ಮೋದಿ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಮಾಡೋದು ಸರಿನಾ? ಗೌರಿ ಸಾವಿಗೆ ಬರುವ ಮುನ್ನ ಯಾರ ಮಗ್ಗಲಲ್ಲಿ ಮಲಗಿದ್ದೆ ಅಂತ ಬಂದಿರೊ ಲೇಖನ ಶೇರ್ ಮಾಡೋದು ಸರಿನಾ? ಮೋದಿ ಬಿಜೆಪಿ ನಾಯಕ ಎಂದು ನಾನು ಪ್ರಶ್ನೆ ಮಾಡಿಲ್ಲ. ನಾನು ದೇಶದ ಪ್ರಧಾನಿಗೆ ಪ್ರಶ್ನೆ ಮಾಡಿದ್ರೆ ತಪ್ಪಾ? ಎಂದು ಪ್ರಕಾಶ್ ರೈ ತಮ್ಮ ಅಸಮಾಧಾನ ಹೊರಹಾಕಿದರು.
Comments