ಜಿಲ್ಲಾಸ್ಪತ್ರೆಯ ಯಡವಟ್ಟು, ವೃದ್ಧೆಯ ಶವದ ಬದಲು ಹುಡುಗಿಯ ಶವ ರವಾನೆ

ದಾವಣಗೆರೆಯ ಬೂದಾಳ್ ಗ್ರಾಮದ ಕೆಂಚಮ್ಮ(60) ಎಂಬುವವರು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ತಂದಿದ್ದರು. ಈ ವೇಳೆ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ ನಾಳೆ ಬನ್ನಿ ಅಂತಾ ಪೊಲೀಸರು ಹಾಗೂ ಕುಟುಂಬಸ್ಥರನ್ನು ವೈದ್ಯರು ವಾಪಸ್ಸು ಕಳುಹಿಸಿದ್ದರು. ಅಲ್ಲದೆ, ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಈಗಾಗ್ಲೇ ಒಂದು ಶವವನ್ನು ತಂದಿಡಲಾಗಿತ್ತು.
28 ವರ್ಷದ ಶಿಲ್ಪಾ ಎಂಬ ಯುವತಿಯ ಶವ ಈಗಾಗಲೇ ಶವಾಗಾರದಲ್ಲಿತ್ತು. ಆದರೆ, ಮರಣೋತ್ತರ ಪರೀಕ್ಷೆ ನಂತರ ಮಲೇಬೆನ್ನೂರು ಪೊಲೀಸರು ಶಿಲ್ಪಾ ಕುಟುಂಬಸ್ಥರಿಗೆ ಕೆಂಚಮ್ಮ ಶವ ಹಸ್ತಾಂತರ ಮಾಡಿದ್ದಾರೆ. ಕೆಂಚಮ್ಮ ಶವಕ್ಕೆ ಶಿಲ್ಪಾ ಮನೆಯವರಿಂದ ಅಂತ್ಯಕ್ರಿಯೆ ನೇರವೇರಿದೆ. ಆದರೆ, ಜಿಲ್ಲಾಸ್ಪತ್ರೆ ಶವಾಗಾರದಲ್ಲೇ ಶಿಲ್ಪಾ ಶವ ಉಳಿದುಕೊಂಡಿದ್ದು, ಶವಾಗಾರದ ಮುಂದೆ ಕೆಂಚಮ್ಮ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Comments