ಅದ್ಧೂರಿಯಾಗಿದೆ ಶಿವರಾಮೇಗೌಡರ ಪುತ್ರಿಯ ವಿಡಿಯೋ ಇನ್ವಿಟೇಷನ್

ರೆಡ್ಡಿ ಮಗಳ ಮದ್ವೆಯ ಆಮಂತ್ರಣಕ್ಕಿಂತಲೂ ಅದ್ಧೂರಿ ಇನ್ವಿಟೇಷನ್ ಒಂದು ರೆಡಿಯಾಗಿದೆ. ಮಂಡ್ಯದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎಲ್.ಆರ್. ಶಿವರಾಮೇಗೌಡರ ಪುತ್ರಿ ಕಾವ್ಯ ಗೌಡ ಮದುವೆಗೆ ವಿಭಿನ್ನ ವಿಡಿಯೋ ಇನ್ವಿಟೇಷನ್ ಸಿದ್ಧವಾಗಿದೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಗಳ ಮದುವೆಯ ಅದ್ಧೂರಿ ಇನ್ವಿಟೇಷನ್ ಇಡೀ ರಾಜ್ಯಕ್ಕೆ ಗೊತ್ತಿರೋ ವಿಚಾರ. ಆದರೆ, ಇದೀಗ ರಾಜೀವ್ ಅನ್ನೋರ ಜತೆ ಡಿಸೆಂಬರ್ 6ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ವಿವಾಹಕ್ಕೆ 'ನೀಡಿರೋ ಬನ್ನಿ… ಬನ್ನಿ… ನಮ್ಮ ಮಗಳ ಮದ್ವೆಗೆ..!' ಗೀತ ಸಂಯೋಜನೆ ಹಾಗೂ ವಿಶೇಷ ಡಿಜಿಟಲೈಸ್ಡ್ ಮಾಡಿರೋ ವಿಶೇಷ ಆಮಂತ್ರಣ ಇದೀಗ ಎಲ್ಲೆಡೆ ವೈರಲ್ ಆಗಿದೆ.
Comments