ಗಿನ್ನಿಸ್ ದಾಖಲೆಯ ಪುಟ ಸೇರಿದ ಮೈಸೂರು

ಮೊದಲ ಬಾರಿಗೆ ಗಿನ್ನಿಸ್ ರೆಕಾರ್ಡ್ಗೆ ಮೈಸೂರಿನ ಯೋಗ ಪ್ರದರ್ಶನ ಸೇರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, 500 ಸಂಖ್ಯೆ ಅಂತರದಿಂದ ದಾಖಲೆಯ ಗರಿ ಕಳೆದುಕೊಂಡಿತ್ತು. ಜಿಲ್ಲಾಧಿಕಾರಿ ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಕೇಳಿಕೊಂಡಾಗ ಪರಿಶೀಲನೆ ನಡೆಸಿದ ಸಮಿತಿ 55,506 ಮಂದಿ ಭಾಗವಹಿಸಿದ್ದ ಹಿನ್ನೆಲೆ ವಿಶ್ವ ದಾಖಲೆಯ ಮುಕುಟಕ್ಕೆ ಮೈಸೂರು ಯೋಗ ಸೇರಿದೆ.
ಈ ಹಿಂದೆ ಗುಜರಾತ್ ನಲ್ಲಿ ಬಾಬಾ ರಾಮ್ ದೇವ್ ನೇತ್ವತ್ವದಲ್ಲಿ ನಡೆದಿದ್ದ ಬೃಹತ್ ಯೋಗ ಪ್ರದರ್ಶನದಲ್ಲಿ 54,522 ಮಂದಿ ಭಾಗವಹಿಸಿದ್ದರು. ಆದರೆ, ಮೈಸೂರಿನಲ್ಲಿ 54,101 ಮಂದಿ ಯೋಗ ಪ್ರದರ್ಶನ ಮಾಡಿದ್ದರು. ಆದರೆ 1016 ಸಂಖ್ಯೆಯ ಅಂತರದಿಂದ ಯೋಗ ದಾಖಲೆ ದೂರ ಉಳಿಯಿತು. ಆ ವೇಳೆಯಲ್ಲಿ ಸಣ್ಣ ದಾಖಲೆಯೊಂದನ್ನು ಜಿಲ್ಲಾಡಳಿತ ಮರೆತಿತ್ತು. ರೇಸ್ ಕೋರ್ಸ್ನಲ್ಲಿ ಯೋಗ ಆರಂಭಕ್ಕೂ ಮುನ್ನವೇ ಸಾವಿರಾರು ಮಂದಿ ಯೋಗ ಪಟುಗಳು ಒಳಗೆ ಸೇರಿದ್ದರು. ಇವರ ಹೆಸರು ಗಿನ್ನಿಸ್ ದಾಖಲೆಗೆ ಸಲ್ಲಿಸಿದ ಲೆಕ್ಕದಲ್ಲಿ ಇರಲಿಲ್ಲ. 2 ನೇ ಹಂತದ ಪರಿಶೀಲನೆಯಲ್ಲಿ 55,506 ಮಂದಿ ಪಾಲ್ಗೊಂಡಿರುವುದು ಖಾತ್ರಿ ಪಡಿಸಿಕೊಂಡ ಗಿನ್ನಿಸ್ ಮಾರ್ಗದರ್ಶಕರು ಯೋಗ ದಾಖಲೆಯನ್ನು ಪರಿಗಣಿಸಿದ್ದಾರೆ. ಗುಜರಾತ್ನಲ್ಲಿ 54,522 ಮಂದಿ ಪಾಲ್ಗೊಂಡಿದ್ದರಿಂದ 984 ಸಂಖ್ಯೆ ಹೆಚ್ಚುವರಿಯಾಗಿ ಮೈಸೂರು ವಿಶ್ವ ದಾಖಲೆ ಮನ್ನಣೆ ಪಡೆದಿದೆ.
Comments