ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಪಡೆದ ಸೂಪರ್ ಸ್ಟಾರ್ ರಜನಿ

ಸದಾ ಆಧ್ಯಾತ್ಮದ ಬಗ್ಗೆ ಚಿಂತಿಸುವ ರಜನಿಕಾಂತ್ ಅವರಿಗೆ ದೇವರ ಮೇಲೆ ಅಗಾಧವಾದ ನಂಬಿಕೆಯಿದೆ. ರಾಯರ ಪರಮ ಭಕ್ತರಾಗಿರುವ ರಜನಿಕಾಂತ್ ಇಂದು ಮಂಗಳವಾರ ಬೆಳಗ್ಗೆ 7.30ಕ್ಕೆ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದರು.
ರಜನಿಕಾಂತ್ ಮೊದಲು ಮಂಚಾಲಮ್ಮ ದೇವಿಯ ದರ್ಶನ ಪಡೆದು ನಂತರ ರಾಯರ ಮೂಲ ಬೃಂದಾವನದ ದರ್ಶನ ಪಡೆದು, ಅರ್ಧ ಗಂಟೆಗೂ ಹೆಚ್ಚು ಕಾಲ ಧ್ಯಾನ ಮಗ್ನರಾದರು. ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಜಿನಿಕಾಂತ್ ರನ್ನು ಸನ್ಮಾನಿಸಿ ಆಶೀರ್ವದಿಸಿದ್ರು. ಇನ್ನು ಈ ವೇಳೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರೊಂದಿಗೆ ಮಾತನಾಡಿದ ರಜನಿಕಾಂತ್ ಅವರು ರಾಯರ ಮಠದ ಉದ್ಧಾರಕ್ಕಾಗಿ ಸಹಾಯ ಮಾಡುವುದಾಗಿ ತಿಳಿಸಿದರು.
Comments