ಸಿನಿಮೀಯ ಸ್ಟೈಲ್ ನಲ್ಲಿ ಮದುಮಗಳು ಎಸ್ಕೇಪ್...!!
ಮೆಹಂದಿ ಶಾಸ್ತ್ರ ಮುಗಿಸಿದ ಯುವತಿ ಮರುದಿನವೇ ಮನೆಯಿಂದ ಪರಾರಿಯಾಗಿದ್ದಾಳೆ. ಮನೆಯವರು ಬೆಂಗಳೂರಿನ ಇಂಜಿನಿಯರ್ ಜತೆ ಯುವತಿ ಮದುವೆಗೆ ಎಲ್ಲ ತಯಾರಿ ಮಾಡುತ್ತಿದ್ದರು. ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯಲ್ಲಿ ಚಪ್ಪರ ಹಾಕಿದ್ದು, ಹಸೆಮಣೆ ಏರಬೇಕಿದ್ದ ಯುವತಿ ಪರಾರಿಯಾಗಿ ಹೋಗಿದ್ದಾಳೆ.
ತನ್ನ ಪ್ರಿಯಕರನೊಂದಿಗೆ ಮೊದಲೇ ಮದುವೆ ಮಾಡಿಕೊಂಡಿದ್ದ ಯುವತಿಯೊಬ್ಬಳು ಕುಟುಂಬದ ಒತ್ತಾಯಕ್ಕೆ ಮಣಿದು ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಮದುವೆ ದಿನವೇ ಮನೆಯಿಂದ ಪರಾರಿಯಾಗಿರುವ ಘಟನೆ ಇಲ್ಲಿ ನಡೆದಿದೆ. ನವೆಂಬರ್ 11 ರಂದೇ ಮಧ್ಯಪ್ರದೇಶದ ಇಂದೋರ್ ಮೂಲದ ಯುವಕನ ಜತೆ ಯುವತಿ ಮದುವೆ ಮಾಡಿಕೊಂಡಿದ್ದಳಂತೆ. ಹೀಗಾಗಿ ಮನೆಯಿಂದ ಮಾಯವಾದ ಮಾಯಾಂಗಿನಿ, ತನ್ನ ಮದುವೆ ಸರ್ಟಿಫಿಕೇಟ್‌ನ್ನು ವಾಟ್ಸಾಪ್‌ನಲ್ಲಿ ನಿಶ್ಚಿತಾರ್ಥವಾಗಿದ್ದ ಹುಡುಗನಿಗೆ ಕಳುಹಿಸಿದ್ದಾಳೆ.
Comments