ಸಿಎಂ ಹೊಗಳುವ ಭರದಲ್ಲಿ ಜೆಡಿಎಸ್ ರೆಬೆಲ್ ಶಾಸಕ ಮಾಡಿದ ಎಡವಟ್ಟೇನು?

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಹಲವಾರು ಭಾಗ್ಯಗಳನ್ನು ಜನತೆಗೆ ನೀಡಿದ್ದಾರೆ. ಕ್ಷೀರ ಭಾಗ್ಯವಾಗಲಿ, ಶೀಲ ಭಾಗ್ಯವಾಗಲಿ ಇನ್ನು ಅನೇಕ ಭಾಗ್ಯಗಳನ್ನು ನೀಡಿದ್ದಾರೆ ಎಂದು ನೆರೆದಿದ್ದ ಜನತೆಯ ನಗುವಿಗೆ ಕಾರಣರಾದರು.
ಸಿಎಂ ಸಿದ್ದರಾಮಯ್ಯರನ್ನು ಹೊಗಳುವ ಭರದಲ್ಲಿ ಬಂಡಾಯ ಜೆಡಿಎಸ್ ಮುಖಂಡ ಜಮೀರ್ ಅಹ್ಮದ್ ನೀಡಿದ ಹೇಳಿಕೆ ನೆರೆದಿದ್ದ ಜನರಲ್ಲಿ ನಗೆಯ ಅಲೆ ಎಬ್ಬಿಸಿತು.ಸಿಎಂ ಸಿದ್ದರಾಮಯ್ಯಗೆ ಯಾರೂ ಟಿಪ್ಪು ಜಯಂತಿ ಮಾಡುವಂತೆ ಹೇಳಿಲ್ಲ. ಆದರೆ,ತಾವಾಗಿಯೇ ಟಿಪ್ಪು ಜಯಂತಿ ಆಚರಿಸಿ ಮುಸ್ಲಿಂ ಸಮುದಾಯದ ಸಂತಸಕ್ಕೆ ಕಾರಣವಾಗಿದ್ದಾರೆ ಎಂದರು.ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮತ್ತೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಸೇವೆ ಸಲ್ಲಿಸಲಿದ್ದಾರೆ ಎಂದು ಜಮೀರ್ ಅಹ್ಮದ್ ಭವಿಷ್ಯ ನುಡಿದಿದ್ದಾರೆ.
Comments