ಮೈಸೂರ್ ಪಾಕ್ ನ ಹಿಸ್ಟರಿ ನಿಮಗೆ ಗೊತ್ತ..!!
ಮೈಸೂರು ಪಾಕ್ ಮೈಸೂರು ಮಹಾರಾಜರ ಅರಮನೆಯ ಪಾಕ ಶಾಲೆಯಲ್ಲಿ ತಯಾರಿಸಲಾಗಿದ್ದ ಪಾಕ ವಿಶೇಷ ಎಂದು ಕನ್ನಡಿಗರ ವಾದವಾದರೆ, ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ ಟಿಪ್ಪಣಿ ಆಧಾರಿಸಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂಬುದು ತಮಿಳಿಗರ ವಾದ.
ಮೈಸೂರು ಪಾಕ್ 74 ವರ್ಷಗಳ ಹಿಂದೆ ಆವಿಷ್ಕಾರಗೊಂಡಿದ್ದು, ಅಂದು ಮದ್ರಾಸ್ ಸರ್ಕಾರವಿದ್ದ ಕಾರಣ ಮೈಸೂರ್ ಪಾಕ್ ತಯಾರಿಸಿದ ಹೆಮ್ಮೆ ನಮ್ಮದು ಎನ್ನುತ್ತಿದ್ದಾರೆ ತಮಿಳಿಗರು. ಪ್ರಸ್ತುತ ಈ ವಿಚಾರದಲ್ಲಿ ಮೈಸೂರ್ ಪಾಕ್ ಭೌಗೋಳಿಕ ಸೂಚ್ಯಂಕದ ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ಮೈಸೂರು ಪಾಕ್ ಮೊದಲು ತಯಾರಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರಾದ ಕಕಸುರ ಮಾದಪ್ಪ ಎಂಬವರು ಈ ಸಿಹಿಯನ್ನು ತಯಾರಿಸಿದ್ದರು. ಮೊದಲು ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂವರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು.
ಕೊನೆಗೆ ಅದರ ಹೆಸರು ಕೇಳಿದಾಗ ಇದು 'ಮೈಸೂರು ಪಾಕ್' ಎಂದು ಹೇಳಿದರು. ಪಾಕ್ ಅಥವಾ ಪಾಕ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ. ಇದು ಸಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ವಿಶೇಷವಾಗಿ ಮಾಡುತ್ತಾರೆ ಎಂಬುದು ಕನ್ನಡಿಗರ ವಾದ. ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯವರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಈಗ ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.
Comments