ಪ್ರಧಾನಿ ಮೋದಿಯ ಅಲೆಯ ಬಗ್ಗೆ ಮಾತಾಡಿದ ದೇವೇಗೌಡ್ರು

ಬೆಳಗಾವಿ : ದೇಶದಲ್ಲಿ ಪ್ರಧಾನಿ ಮೋದಿ ಅಲೆಯಿಲ್ಲ, ದೇವರು ಕಣ್ಣು ಬಿಟ್ಟರೆ ಎಲ್ಲ ಅಲೆಯೂ ಕೊಚ್ಚಿ ಹೋಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ಮುಂದೆ ಯಾವ ಅಲೆಯೂ ಇಲ್ಲ, ಒಂದೊಂದು ಸಂದರ್ಭದಲ್ಲಿ ಒಂದೊಂದು ಅಲೆ ರಾಷ್ಟ್ರದಲ್ಲಿರುತ್ತದೆ. ಇದನ್ನು ಮೋದಿಯೂ ನಂಬಬೇಕು ಹಾಗೂ ಜನರೂ ನಂಬಬೇಕು. ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷದ ಆಡಳಿತ ನೋಡಿ ಬೇಸತ್ತಿದ್ದೇವೆ. ರಾಜ್ಯದಲ್ಲಿ ಯೋಗ್ಯ ಸರ್ಕಾರ ಆಡಳಿತಕ್ಕೆ ಬರಬೇಕಿದೆ ಎಂದರು.ಇನ್ನು ದೇವರಲ್ಲಿ ಅಧಿಕಾರ ಮಾಡುವ ಶಕ್ತಿ ಜೆಡಿಎಸ್ ಗೆ ಆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
Comments