ಮುಷ್ಕರ ನಿಂತರೂ ನಿಲ್ಲದ ರೋಗಿಗಳ ನರಳಾಟ
ಖಾಸಗಿ ವೈದ್ಯರು ನಡೆಸುತ್ತಿದ್ದ ಮುಷ್ಕರ ನಿಂತಿದೆಯಾದರೂ, ವೈದ್ಯರ ಪ್ರತಿಭಟನೆ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಗೊಂದಲ ಮುಂದುವರೆದಿದೆ. ಇದರ ನಡುವೆ ರಾಜ್ಯದ ವಿವಿಧೆಡೆ ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಇಂದು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇಂದೂ ಸಹ ರಾಜ್ಯದ ವಿವಿಧ ಕಡೆ ಹಲವು ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಆಗಿದೆ.
ವೈದ್ಯರ ಸಂಘ, ಕರ್ನಾಟಕದ ವಿಭಾಗ, ಸಿಎಂ ಜೊತೆಗೆ ಸಭೆ ನಡೆಸಿ, ಕಾಯ್ದೆಯಲ್ಲಿನ ಲೋಪದೋಷಗಳ ಬಗ್ಗೆ, ಕಾಯ್ದೆಯಲ್ಲಿನ ಬೇಕು ಬೇಡಗಳ ಬಗ್ಗೆ ಚರ್ಚೆ ನಡೆಸಲಿದೆ. ಈ ಬಳಿಕ ರಾಜ್ಯಾದ್ಯಂತ ಮುಷ್ಕರ ಕೈಬಿಡುವುದೋ ಅಥವಾ ಮುಂದುವರೆಸುವುದೋ ಎಂಬ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಲಿದೆ.
ಇಂದು ಮಧ್ಯಾಹ್ನ 2ಗಂಟಗ್ಕೆ ಸಿಎಂ ಹಾಗೂ ಖಾಸಗಿ ವೈದ್ಯರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸರ್ಕಾರಕ್ಕೆ ವೈದ್ಯರು ತಲೆಬಾಗುತ್ತಾರೇ ಅಥವಾ ಸಂಧಾನಕ್ಕೆ ವೈದ್ಯರು ಸೊಪ್ಪು ಹಾಕ್ತಾರ ಎಂಬುದು ನಿರ್ಧಾರವಾಗಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ಇಂದು ನಡೆಯಲಿದೆ. ಬೆಳಗಾವಿಯ ಕನ್ನಡಸೌಧದಲ್ಲಿ ಇಂದು ಹೈಕೋರ್ಟ್ ನಿರ್ದೇಶನದಂತೆ ವೈದ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ನಿನ್ನೆ ಸಚಿವರೊಂದಿಗೆ ಚರ್ಚೆ ನಡೆಸಿದ ವಿಷಯವನ್ನು ಸಿದ್ದರಾಮಯ್ಯ ಸಭೆಯಲ್ಲಿ ವೈದ್ಯರ ಮುಂದಿಡಲಿದ್ದಾರೆ. ವಿಧೇಯಕ ಮಂಡನೆಗೆ ಸಿದ್ಧವಾಗಿರುವ ಸರ್ಕಾರ ಹಾಗೂ ಪಟ್ಟು ಬಿಡದ ಖಾಸಗಿ ಆಸ್ಪತ್ರೆ ವೈದ್ಯರ ನಡುವಿನ ಜಟಾಪಟಿಗೆ ಕೊನೆಯಾಗುತ್ತಾ? ಸಂಧಾನ ಫಲಪ್ರದವಾಗುತ್ತಾ ಕಾದುನೋಡಬೇಕಿದೆ.
Comments