ಮುಷ್ಕರ ಕೈಬಿಟ್ಟು ಕೆಲಸದಲ್ಲಿ ನಿರತರಾದ ವೈದ್ಯರು

ಧಿ ಮುಷ್ಕರ ಕೈಬಿಡುವುದರ ಜತೆಗೆ ಶುಕ್ರವಾರ ಬೆಳಗ್ಗೆಯಿಂದ ಎಲ್ಲಾ ರೀತಿಯ ವೈದ್ಯಕೀಯ ಸೇವೆ ನೀಡಲು ತೀರ್ಮಾನಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಒಮ್ಮತದ ತೀರ್ಮಾನ ತೆಗೆದುಕೊಂಡು ಒಪಿಡಿ ಸೇವೆ ಒದಗಿಸಲಿದ್ದೇವೆ ಎಂದು ಫನಾ ನಿಯೋಜಿತ ಅಧ್ಯಕ್ಷ ಡಾ.ಸಿ.ಜಯಣ್ಣ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವೈದ್ಯರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಸಮಾಜದ ಹಿತದೃಷ್ಟಿಯಿಂದ ಕೂಡಲೇ ಮುಷ್ಕರ ವಾಪಾಸ್ ಪಡೆಯುವಂತೆ ಸೂಚಿಸಿತ್ತು. ಜೊತೆಗೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕರ್ನಾಟಕ ಮೆಡಿಕಲ್ ಕೌನ್ಸಿಲ್, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳ ಸಂಘ, ಭಾರತೀಯ ವೈದ್ಯಕೀಯ ಸಂಘಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ. 23ಕ್ಕೆ ಮುಂದೂಡಿತು. ಸರ್ಕಾರದ ತೀರ್ಮಾನ ಸಕಾರಾತ್ಮಕವಾಗಿಲ್ಲದ್ದಿದ್ದರೆ ಮತ್ತೆ ಹೋರಾಟ ಆರಂಭಿಸಲಿದ್ದೇವೆ. ಬೆಂಗಳೂರು ಘಟಕದಿಂದ ಮುಷ್ಕರ ವಾಪಸ್ ಪಡೆದಿದ್ದೇವೆ. ಜಿಲ್ಲಾ ಮಟ್ಟದ ತೀರ್ಮಾನಗಳನ್ನು ಆಯಾ ಘಟಕದಿಂದಲೇ ತೆಗೆದುಕೊಳ್ಳುತ್ತಾರೆ ಎಂದು ಫನಾ ನಿಯೋಜಿತ ಅಧ್ಯಕ್ಷ ಡಾ.ಸಿ.ಜಯಣ್ಣ ಸ್ಪಷ್ಟಪಡಿಸಿದ್ದಾರೆ.
ಸತ್ಯಾಗ್ರಹ ಮುಂದುವರಿಯುತ್ತೆ: ಮುಖ್ಯಮಂತ್ರಿಯವರು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಐಎಂಎ ಕರ್ನಾಟಕ ಘಟಕದ ಪದಾಧಿಕಾರಿಗಳ ಸಭೆ ಕರೆದಿದ್ದು, ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸಲು ಸಂಘದ ಸದಸ್ಯರು ನಿರ್ಧರಿಸಿದ್ದಾರೆ. ಸಂಘದಿಂದ ಅಧಿಕೃತವಾಗಿ ಒಪಿಡಿ ಬಂದ್‌ಗೆ ಕರೆ ನೀಡಿಲ್ಲ. ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಯುವುದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಐಎಂಎ ಕರ್ನಾಟಕ ಶಾಖೆ ಗೌವರ ಕಾರ್ಯದರ್ಶಿ ಡಾ.ಬಿ.ವೀರಣ್ಣ ಮಾಹಿತಿ ನೀಡಿದರು.
Comments