ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯೆಕ್ತಪಡಿಸಿ ಭಾರತ್ ಬಂದ್‌ಗೆ ಕರೆ

16 Nov 2017 5:56 PM | General
251 Report

ಡಿಸೆಂಬರ್ 1ರಂದು ಪದ್ಮಾವತಿ ಚಿತ್ರ ರಿಲೀಸ್ ಆಗಲಿದ್ದು ಅಂದೇ ಕ್ರಾಂತಿಸೇನೆ ಸಂಘಟನೆ ದೇಶಾದ್ಯಂತ ಬಂದ್‌ಗೆ ಕರೆ ನೀಡಿದೆ. ಚಿತ್ರ ಬಿಡುಗಡೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬಂದ್​​ಗೆ ಕರೆ ನೀಡಲಾಗಿದೆ.

ಸಂಜಯ್ ಲೀನಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ರಿಲೀಸ್‌ಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್‌ ನೀಡಿದರೂ ಸಂಕಷ್ಟ ಮಾತ್ರ ತಪ್ಪಿಲ್ಲ. ಇನ್ನು ಬೆಂಗಳೂರು ಸೇರಿದಂತೆ ದೇಶಾದ್ಯಂತ, ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟನೆಯ ಕಿಚ್ಚು ಜೋರಾಗಿದೆ. 

Edited By

Shruthi G

Reported By

Madhu shree

Comments