ಪ್ರತಿಭಟನೆ ಕೈ ಬಿಡದಿದ್ದರೆ ಕಾನೂನು ಕ್ರಮ ಜಾರಿ ವೈದ್ಯರಿಗೆ ಹೈ ಕೋರ್ಟ್ ಎಚ್ಚರಿಕೆ

ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದರೆ ರೋಗಿಗಳ ಪಾಡೇನು? ಕೂಡಲೇ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಾಧೀಶ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರು ವಿಭಾಗೀಯ ಪೀಠ ಆದೇಶ ನೀಡಿದೆ.
ವಕೀಲ ಅಮೃತೇಶ್ ಮತ್ತಿತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಷ್ಕರ ನಿರತ ವೈದ್ಯರ ಯಾವುದೇ ಸಮಸ್ಯೆಗಳನ್ನು ಆಲಿಸುವುದಿಲ್ಲ. ಮೊದಲು ಮುಷ್ಕರ ಬಿಟ್ಟು ಕರ್ತವ್ಯದಲ್ಲಿ ನಿರತರಾಗಿ ನಂತರ ನೋಡೋಣ ಎಂದು ನಿರ್ದೇಶನ ನೀಡಿದರು.ಕೋರ್ಟ್‍ಗೆ ವೈದ್ಯಕೀಯ ಸಂಘಗಳು ಅಭಿಪ್ರಾಯ ತಿಳಿಸುವಲ್ಲಿಯೇ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಯಿತು. ಐಎಂಸಿ ಪರ ವಕೀಲರು ಸೇವೆಗೆ ಹಾಜರಾಗುವುದಾಗಿ ಕೋರ್ಟ್ ಮುಂದೆ ತಮ್ಮ ಅಭಿಪ್ರಾಯ ತಿಳಿಸಿದರೆ ಭಾರತೀಯ ವೈದ್ಯಕೀಯ ಒಕ್ಕೂಟ ನಾಳೆ ಕೆಲಸಕ್ಕೆ ಹಾಜರಾಗುವುದಾಗಿ ತಿಳಿಸಿದೆ. ಆದರೆ ನ್ಯಾಯಾಲಯ ಈ ಕೂಡಲೇ ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕೆಂದು ಖಡಕ್ ಸೂಚನೆ ನೀಡಿದೆ.
Comments