ಡಿವೈಎಸ್ ಪಿ ಗಣಪತಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಪ್ರತಿಕ್ರಿಯಿಸಿದ ಎಚ್ ಡಿಕೆ

15 Nov 2017 3:33 PM | General
329 Report

ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಅವಸರದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸರಕಾರದ ಒತ್ತಡದಿಂದಾಗಿ ಸಿಐಡಿ ಅಧಿಕಾರಿಗಳು ಸಚಿವ ಜಾರ್ಜ್‌ಗೆ ಕ್ಲೀನ್ ಚಿಟ್ ನೀಡಿದ್ದಾರೆ ಎನ್ನುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡ ಕೋಣೆಯನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದಾಗ ಬುಲೆಟ್ ಪತ್ತೆಯಾಗಿರುವುದು ಕಂಡುಬಂದಿದೆ ಎಂದರು.ಸಚಿವ ಜಾರ್ಜ್ ಈಗಲೇ ರಾಜೀನಾಮೆ ನೀಡೋದು ಉಚಿತ ಅಲ್ಲ, ಸಚಿವ ಜಾರ್ಜ್ ರಾಜೀನಾಮೆಗೆ ಈಗ ಸಮಯ ಅಲ್ಲ ಪ್ರಕರಣದಲ್ಲಿ ಸಿಬಿಐ ಪ್ರಬಲ ಸಾಕ್ಷಿ ಹುಡುಕಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ಹೇಳಿದರು.

ಹಿಂದೆ ಸಿಐಡಿ ಅಧಿಕಾರಿಗಳು ಯಾವ ರೀತಿ ಕೋಣೆಯನ್ನು ಮಹಜರು ಮಾಡಿದ್ದರು ಎನ್ನುವುದಕ್ಕೆ ಸಿಬಿಐ ತನಿಖೆಯಲ್ಲಿ ಸಿಕ್ಕ ಬುಲೆಟ್ ಸಾಕ್ಷಿಯಾಗಿದೆ. ಎಂತಹ ಅವಸರದಲ್ಲಿ ತನಿಖೆ ಮಾಡಿದ್ದರು ಎನ್ನುವುದು ಸಾಬೀತಾಗುತ್ತದೆ ಎಂದರು.ಸರಕಾರ ಪ್ರಕರಣದಲ್ಲಿರುವ ಆರೋಪಿಗಳ ಸಾಕ್ಷ್ಯಗಳನ್ನು ಮುಚ್ಚಿಹಾಕಲು ಸಿಐಡಿ ಅಧಿಕಾರಿಗಳನ್ನು ಬಳಸಿಕೊಂಡಿತೆ ಎನ್ನುವ ಅನುಮಾನ ಎಲ್ಲರಲ್ಲಿ ಕಾಡುತ್ತಿದೆ. ಸರಕಾರಕ್ಕೆ ಇದರಿಂದ ನಾಚಿಕೆಯಾಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Edited By

Shruthi G

Reported By

Shruthi G

Comments