ಸೂರ್ಯ-ಚಂದ್ರರಿರುವ ತನಕ ಬೆಳಗಾವಿ ರಾಜ್ಯದ ಅಂಗ : ದೇವೇಗೌಡರ ಗುಡುಗು

ಜೆಡಿಎಸ್ ಆಯೋಜಿಸಿದ್ದ ಉತ್ತರ ಕರ್ನಾಟಕ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ವರಿಷ್ಠರಾಗಿರುವ ಎಚ್.ಡಿ. ದೇವೇಗೌಡ , ಬೆಳಗಾವಿ ಸೂರ್ಯಚಂದ್ರರಿರುವ ತನಕವೂ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಗುಡುಗಿದರು.
ಮೊರಾರ್ಜಿ ದೇಸಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗಲೇ ಬೆಳಗಾವಿ ಗಡಿ ವಿಷಯ ಮುಗಿದುಹೋಗಿದ್ದು, ಎಂಇಎಸ್ ವಿನಾಕಾರಣ ತಗಾದೆ ತೆಗೆಯುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಠರಾಗಿರುವ ಎಚ್.ಡಿ. ದೇವೇಗೌಡ ಗುಡುಗಿದ್ದಾರೆ.ಬೆಳಗಾವಿಗೆ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಆಗಮಿಸಿ ದೊಡ್ಡ ದೊಡ್ಡ ಸಮಾವೇಶಗಳನ್ನು ಆಯೋಜಿಸಿ ಭಾಷಣ ಮಾಡಿ ಹೋಗುತ್ತಾರೆ ಅಷ್ಟೆ. ಅವರೆಲ್ಲ ಮಹದಾಯಿ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸರ್ಕಾರ ಮನಸು ಮಾಡಿದರೆ ಮಹದಾಯಿಯನ್ನು ಇತ್ಯರ್ಥಪಡಿಸಬಹುದು. ಆದರೆ ಅದು ಮನಸು ಮಾಡುತ್ತಿಲ್ಲ ಎಂದರು.
Comments