ಬಿ ಎಂ ಟಿ ಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬಿ ಎಂ ಟಿ ಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಅನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಬಿಪಿಎಲ್ ಕಾರ್ಡ್ ದಾರರಿಗೆ ರಿಯಾಯತಿ ದರದಲ್ಲಿ ಪಾಸ್ ನೀಡಲು ಮುಂದಾಗಿದೆ ಎನ್ನಲಾಗಿದ್ದು ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಅತೀ ಹೆಚ್ಚು ಜನರು ಬಳಸುವ ಸಾರಿಗೆ ಅಂದರೇ ಅದು ಬಿಎಂಟಿಸಿ. ಇಂತಹ ಸಾರಿಗೆ ಇದೀಗ ಜನಸ್ನೇಹಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಬಿಪಿಎಲ್ ಕಾರ್ಡ್ ದಾರರಿಗೆ ವಿಶೇಷ ರಿಯಾಯಿತಿ ದರದಲ್ಲಿ ತಿಂಗಳ ಪಾಸ್ ವಿತರಿಸಲು ಮುಂದಾಗಿದೆ. ಇದುವರೆಗೆ ತಿಂಗಳ ಪಾಸ್ ಗೆ 1050 ರೂಪಾಯಿ ಖರ್ಚು ಮಾಡಬೇಕಿತ್ತು. ಇದನ್ನು ಬಿಪಿಎಲ್ ಕಾರ್ಡ್ ದಾರರಿಗೆ ರೂ.500ಕ್ಕೆ ವಿತರಿಸಲು ಮುಂದಾಗಿದ್ದು, ನಗರದಲ್ಲಿನ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರಾಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.
ಮಹಾನಗರದಲ್ಲಿ ಬಹುತೇಕ ವಾಸಿಸುವವರು ಮಧ್ಯಮವರ್ಗದ ಕುಟುಂಬಗಳು. ಈ ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಂಡಿರುವ ಬಿಎಂಟಿಸಿ, ಇದೀಗ ಜನಸ್ನೇಹಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಅಲ್ಲದೇ ಸಾರ್ವಜನಿಕ ಸಾರಿಗೆ ಬಳಸಲು ಉತ್ತೇಜನ ನೀಡುವ ಸಲುವಾಗಿ, ರಿಯಾಯಿತಿ ದರದಲ್ಲಿ ಪಾಸ್ ವಿತರಿಸಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ರೂ.500 ದರದಲ್ಲಿ ತಿಂಗಳ ಬಸ್ ಪಾಸ್ ವಿತರಿಸಲು ಚಿಂತನೆ ನಡೆಸಿದೆ.
ಮೆಟ್ರೋ ಸೇರಿದಂತೆ ಅನೇಕ ಖಾಸಗಿ ವಾಹನ ಸಂಸ್ಥೆಗಳ ಸ್ಪರ್ಧಾತ್ಮಕ ಪರಿಸ್ಥಿತಿಯಿಂದಾಗಿ ಪ್ರಯಾಣಿಕರು ಇತ್ತೀಚಿನ ದಿವಸಗಳಲ್ಲಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡುವುದು ಕಡಿಮೆಯಾಗುತ್ತಿದೆ. ಇದರಿಂದ ಸಂಸ್ಥೆಯ ಆದಾಯಕ್ಕೂ ಕೂಡ ದಕ್ಕೆಯಾಗುವುದರಲ್ಲಿ ಸಂಶಯವಿಲ್ಲ. ಒಂದು ವೇಳೆ ಬಿಪಿಎಲ್ ಕಾರ್ಡ್ ದಾರರಿಗೆ ರಿಯಾಯತಿ ದರದಲ್ಲಿ ಬಸ್ ಪಾಸ್ ಅನ್ನು ನೀಡಿದರೆ ಆದಾಯ ಹೆಚ್ಚಾಗುವುದಲ್ಲದೇ ದ್ವಿಚಕ್ರ ವಾಹನದಲ್ಲಿ ತಮ್ಮ ಕೆಲಸಗಳಿಗೆ ತೆರಳುವ ಮಂದಿ ಬಸ್ ಗಳನ್ನು ಅವಲಂಬಿಸುವುದರಿಂದ ಟ್ರಾಫಿಕ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ ಇದೆ ಎನ್ನಲಾಗಿದೆ.
Comments