ಟಿಪ್ಪು ಸುಲ್ತಾನ್ ಮರಿಮೊಮ್ಮಕ್ಕಳಿಗೆ ಸುಲ್ತಾನ್ ಏಕತಾ ಪ್ರಶಸ್ತಿ
ಟಿಪ್ಪುವಿನ 8ನೆ ಮರಿಮೊಮ್ಮಕ್ಕಳಾದ ಬಿಲಾಲ್ ಆಲಿ ಷಾ, ಸುಲ್ತಾನ್ ಮತ್ತು ಫರಾಜ್ ಆಲಿಷಾ ಸುಲ್ತಾನ್ ಅವರನ್ನು ಜೂನಿಯರ್ ಟಿಪ್ಪು ಎಂದು ಪರಿಗಣಿಸಿ ಸುಲ್ತಾನ್ ಏಕತಾ ಪ್ರಶಸ್ತಿ ನೀಡಿದರು.
ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಸಂಚಾಲಕ ಸೂಫಿ ಬಲಿದಾ, ಕರ್ನಾಟಕ ಅನುದಾನ ರಹಿತ ಅಲ್ಪ ಸಂಖ್ಯಾತರ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗುಲ್ಫಾನ್ ಅಹಮ್ಮದ್, ಬೆಂಗಳೂರು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಕ್ ಅಹಮ್ಮದ್ ಉಪಸ್ಥಿತರಿದ್ದರು. ಟಿಪ್ಪು ಜಯಂತಿ ಅಂಗವಾಗಿ ಅಖಿಲ ಕರ್ನಾಟಕ ಸೂಫಿ ಸಂತರ ಸಂಘ ಮತ್ತು ಟಿಪ್ಪು ಸುಲ್ತಾನರ ಸಂಘಟನೆಗಳ ಒಕ್ಕೂಟದ ವತಿಯಿಂದ ಟಿಪ್ಪು ಸುಲ್ತಾನರ 8ನೆ ಪೀಳಿಗೆಯ ಮರಿ ಮೊಮ್ಮಕ್ಕಳನ್ನು ನಗರದ ಪ್ರೆಸ್‍ಕ್ಲಬ್‍ನಲ್ಲಿಂದು ಸುಲ್ತಾನ್ ಏಕತಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Comments