ಎಫ್ ಐ ಆರ್ ಇಂಗ್ಲಿಷ್ ನಲ್ಲಿ ಇದ್ದಿದ್ದಕ್ಕೆ ಹಳ್ಳ ಹಿಡೀತು ಕೇಸ್
ಬಿಹಾರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಇಂಥದ್ದೇ ಘಟನೆ ನಡೆದಿದೆ. ಪ್ರಕರಣವೊಂದರ ಎಫ್ ಐ ಆರ್ ಅನ್ನು ಇಂಗ್ಲಿಷ್ ನಲ್ಲಿ ಬರೆದಿದ್ದರಿಂದ ಸರಿಯಾಗಿ ತನಿಖೆ ಮಾಡಲು ಸಾಧ್ಯವಾಗಿಲ್ಲವಂತೆ. ಹೀಗಂತ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಭಾರತದ ಬಹುತೇಕ ಪೊಲೀಸರಿಗೆ ಚೆನ್ನಾಗಿ ಇಂಗ್ಲಿಷ್ ಬರುವುದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಆದ್ರೆ ಸಬ್ ಇನ್ಸ್ ಪೆಕ್ಟರ್, ಇನ್ಸ್ ಪೆಕ್ಟರ್ ಗಳಂಥ ಹಿರಿಯ ಅಧಿಕಾರಿಗಳಿಗೆ ಇಂಗ್ಲಿಷ್ ನಲ್ಲಿ ಬರೆದ ಎಫ್ ಐ ಆರ್ ಅರ್ಥವಾಗುತ್ತಿಲ್ಲ ಅನ್ನೋದೇ ವಿಪರ್ಯಾಸದ ಸಂಗತಿ. ಗುರ್ಗಾಂವ್ ಮೂಲದ ಪ್ರೊಪ್ರೈಟರ್ ಒಬ್ಬರ ವಂಚನೆ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಎಫ್ ಐ ಆರ್ ದಾಖಲಿಸುವಂತೆ 5 ತಿಂಗಳ ಹಿಂದೆಯೇ ಕೋರ್ಟ್ ಕೊಟ್ವಾಲಿ ಪೊಲೀಸರಿಗೆ ಸೂಚಿಸಿತ್ತು. ಇದೀಗ ತನಿಖೆಯಲ್ಲಿ ಪ್ರಗತಿ ಆಗದೇ ಇರುವುದಕ್ಕೆ ಎಫ್ ಐ ಆರ್ ಇಂಗ್ಲಿಷ್ ನಲ್ಲಿರುವುದೇ ಕಾರಣ ಅಂತಾ ಪೊಲೀಸರು ಹೇಳ್ತಿದ್ದಾರೆ. ಬಿಹಾರದಲ್ಲಿ ಬಹುತೇಕ ಪೊಲೀಸರಿಗೆ ಇಂಗ್ಲಿಷ್ ಗೊತ್ತಿಲ್ಲ. ಅರ್ಧದಷ್ಟು ಸಬ್ ಇನ್ಸ್ ಪೆಕ್ಟರ್ ಗಳು, ಬಹಳಷ್ಟು ಮಂದಿ ಇನ್ಸ್ ಪೆಕ್ಟರ್ ಗಳಿಗೆ ಕೂಡ ಇಂಗ್ಲಿಷ್ ಓದಲು ಬರುವುದಿಲ್ಲ, ಅರ್ಥ ಮಾಡಿಕೊಳ್ಳುವುದಂತೂ ದೂರದ ಮಾತು. ಹಾಗಾಗಿ ಎಫ್ ಐ ಆರ್ ಅನ್ನು ಹಿಂದಿಯಲ್ಲೇ ದಾಖಲಿಸಬೇಕು ಅನ್ನೋದು ಅವರ ವಾದ.
Comments