ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು : ಮಾಜಿ ಪ್ರಧಾನಿ ದೇವೇಗೌಡರು
ರಾಮನಗರ : ಬೆಳಗಾವಿ ಕರುನಾಡಿನ ಅವಿಭಾಜ್ಯ ಅಂಗ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಅವರು ನ.13ರಂದು ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಅಬ್ಬನಕುಪ್ಪೆ ಗ್ರಾಮದಲ್ಲಿನ ಆಂಜನೇಯಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.
ಬೆಳಗಾವಿಯಲ್ಲಿನ ಎಂಇಎಸ್ ಪುಂಡಾಟಿಕೆಯನ್ನ ಖಂಡಿಸಿದ ದೇವೇಗೌಡರು, ಅಂದೇ ಹೇಳಿದ್ದರು, 'ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ನಿಮಗೆ ಸಂಭಂದವಿಲ್ಲ, ಅದು ಮುಗಿದ ಅಧ್ಯಾಯ ಎಂದು ಅಂದೇ ಮೊರಾರ್ಜಿ ದೇಸಾಯಿಯವರು ಎಂಇಎಸ್ ನವರಿಗೆ ಖಡಾಖಂಡಿತವಾಗಿ ಹೇಳಿದ್ದರು. ವಿನಾಕಾರಣ ಬೆಳಗಾವಿ ವಿವಾದವನ್ನು ಕೆದುಕುತ್ತಿರುವ ಎಂಇಎಸ್ ನವರಿಗೆ ಕೇಂದ್ರಸರ್ಕಾರ ಬುದ್ಧಿ ಹೇಳಬೇಕು' ಎಂದು ತಾಕೀತು ಹಾಕಿದರು.ವೇದಿಕೆಯಲ್ಲಿ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿಗಳು ಮತ್ತು ಮಾಗಡಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಮತ್ತು ಶಾಸಕ ಬಾಲಕೃಷ್ಣ ಪಾಲ್ಗೊಂಡಿದ್ದರು. ಜೆಡಿಎಸ್ ನ ಬಂಡಾಯ ಶಾಸಕ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ ದೇವೇಗೌಡರವರು ರಾಜ್ಯಸಭಾ ಚುನಾವಣೆ ಬಳಿಕ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
Comments