ಇನ್ ಸ್ಟಾಗ್ರಾಂ ನಲ್ಲಿ ತ್ರಿಷಿಕಾ ಹೆಸರಿನಲ್ಲಿ ನಕಲಿ ಖಾತೆ ಬಗ್ಗೆ ಯದುವೀರ್ ಎಚ್ಚರಿಕೆ

ತ್ರಿಷಿಕಾ ಕುಮಾರಿ ಸಿಂಗ್ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆರೆದು ಇದಕ್ಕೆ ತ್ರಿಷಿಕಾ ದೇವಿ ಒಡೆಯರ್ ಎಂದು ಹೆಸರಿಟ್ಟು, ಆ ಖಾತೆಗೆ ತ್ರಿಷಿಕಾ ಭಾವಚಿತ್ರವನ್ನು ಹಾಕಿದ್ದಾರೆ. ಇದನ್ನು ಯಾರೂ ಫಾಲೋ ಮಾಡಬೇಡಿ ಎಂದು ಯದೂವೀರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ಇದಕ್ಕೂ ತ್ರಿಷಿಕಾಕುಮಾರಿ ಸಿಂಗ್ ಅವರಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಫೇಕ್ ಫ್ರೋಫೈಲ್ ಪ್ಲೀಸ್ ಡೋನ್ಟ್ ಫಾಲೋ ಎಂದು ನಕಲಿ ಖಾತೆಯ ಫೋಟೋ ಮೇಲೆ ಬರೆದು ಯದೂವೀರ್ ತಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ.ದೂರು ನೀಡಲು ಚಿಂತನೆ? , ಪದೇ ಪದೇ ಇನ್ ಸ್ಟಾಗ್ರಾಂನಲ್ಲಿ ತಮ್ಮ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಭಾವಚಿತ್ರ ಹಾಗೂ ಆಕೆಯ ಹೆಸರನ್ನ ಬಳಸಿಕೊಳ್ಳುತ್ತಿರುವುದರ ಬಗ್ಗೆ ಸೈಬರ್ ಕ್ರೈಂಗೆ ದೂರು ನೀಡಲು ಯದುವೀರ್ ಚಿಂತನೆ ನಡೆಸುತ್ತಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿವೆ.
Comments