ರೈತರ ಸಾಲ ಮನ್ನಾ ಕೇವಲ ಭರವಸೆಯೇ?: ಎಚ್ ಡಿಕೆ

13 Nov 2017 9:59 AM | General
452 Report

ಹನ್ನೆರಡು ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ರೈತರ ಬೆಳೆ ಸಾಲದ ಹಣ ಇನ್ನೂ ಕೂಡ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು 8500 ರೂ ಕೋಟಿ ಸಾಲದ ಪೈಕಿ ಕೇವಲ 1000 ಕೋಟಿ ರೂ ಮಾತ್ರ ಬಿಡುಗಡೆ ಮಾಡಿದ್ದಾರೆ. ಉಳಿದ ಸಾಲದ ಹಣ ಮನ್ನಾ ಮಾಡುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ಕೇವಲ ಭರವಸೆಯೇ? ಎಂದು ಪ್ರಶ್ನಿಸಿದ್ದಾರೆ. ಇನ್ನೂ ವಿದ್ಯುತ್ ಸಮಸ್ಯೆಯ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಗಮನ ಸೆಳೆಯಲಿದ್ದೇನೆ ಎಂದು ಅವರು ಹೇಳಿದರು.

Edited By

Shruthi G

Reported By

Shruthi G

Comments